ಮಂಗಳೂರು :(ಅ.10 ) ಅಶ್ರಫ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಭರತ್ ಕುಮ್ಡೇಲು ಕಳೆದ 3-4 ತಿಂಗಳಿನಿಂದ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಕೋರ್ಟ್ ವಾರೆಂಟ್ ಜಾರಿ ಮಾಡಿದ್ದರು.

ಇದನ್ನೂ ಓದಿ: 🔴ಬಂದಾರು: ಬಂದಾರು ಸ.ಉ. ಹಿ. ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ
ಇದರಿಂದ ಮಂಗಳೂರು ಜಿಲ್ಲಾ ಕೋರ್ಟ್ ಗೆ ಅ.10 ರಂದು ತಮ್ಮ ವಕೀಲರ ಮೂಲಕ ಬಂದು ಸರೆಂಡರ್ ಅಗಿದ್ದಾನೆ ಎನ್ನಲಾಗಿದೆ.
ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಕೂಡ ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದು,



ಬಂಟ್ವಾಳ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರಿಂದ ಒಟ್ಟು 14 ಮಂದಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೋಕಾ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಬಂದು ಸರೆಂಡರ್ ಆಗಿದ್ದಾನೆ.
