ಮಂಗಳೂರು:(ಅ.11) ದೇಶದ್ರೋಹದ ಕೇಸ್‌ನಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ಧರ್ಮಗುರು ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಪಿಎಫ್ಐ (PFI) ಸಂಘಟನೆ ಪರ ಪೋಸ್ಟ್ ಹಾಕುತ್ತಿದ್ದು, ಪಿಎಫ್‌ಐ ಬಲಪಡಿಸೋ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ.

ಇದನ್ನೂ ಓದಿ : ಹುಬ್ಬಳ್ಳಿ: ಹಿಂದೂ ಹೆಸರನ್ನು ಇಟ್ಟುಕೊಂಡು ಬಾಲಕಿಯನ್ನು ಪರಿಚಯಿಸಿಕೊಂಡ ಅನ್ಯಕೋಮಿನ ಯುವಕ
ದೇಶದ್ರೋಹ ಕೇಸ್ ಅಡಿ ಮುಸ್ಲಿಂ ಧರ್ಮಗುರು ಅರೆಸ್ಟ್:
ಮಂಗಳೂರಿನ ಉಪ್ಪಿನಂಗಡಿ ಮೂಲದ ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹ ಕೇಸ್‌ನಲ್ಲಿ ಪೊಲೀಸರು ಬಂಧಿಸಿದ್ದು, ಮುಸ್ಲಿಂ ಧರ್ಮಗುರುವಿನ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.


ನಿಷೇಧಿತ ಪಿಎಫ್ಐ ಸಂಘಟನೆ ಪರ ಪೋಸ್ಟ್:
ಸೈಯದ್ ಇಬ್ರಾಹಿಂ ತಂಙಳ್ ನಿಷೇಧಿತ ಸಂಘಟನೆಯಾದ ಪಿಎಫ್‌ಐ ಪರ ಪೋಸ್ಟ್ ಹಾಕುತ್ತಿದ್ದ. ಪಿಎಫ್ಐ ಸಂಘಟನೆ ಬಲಪಡಿಸೋ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಈ ನಿಷೇಧಿತ ಸಂಘಟನೆ ಪರ ಪೋಸ್ಟ್ ಹಾಕಿ, ಪ್ರಚಾರ ಮಾಡುತ್ತಿದ್ದ. ಇದೇ ಕಾರಣಕ್ಕೆ ಸೈಯದ್ ಇಬ್ರಾಹಿಂ ತಂಙಳ್‌ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 113/2025 U/s 10 (a), (i), 13, 18 UAPA Act ರಂತೆ ಪ್ರಕರಣ ದಾಖಲು ಮಾಡಲಾಗಿದೆ.

