Tue. Oct 14th, 2025

ಸಾವ್ಯ: ಶುಭೋದಯ ಹಿಂದೂ ಸೇವಾ ಟ್ರಸ್ಟ್ (ರಿ.) ಸಾವ್ಯ ಇದರ ವತಿಯಿಂದ ರಕ್ತದಾನ ಶಿಬಿರ ಹಾಗೂ ಟ್ರಸ್ಟ್ ನ ಮಹಿಳಾ ಘಟಕದ ಹೊಸ ತಂಡದ ಉದ್ಘಾಟನೆ

ಸಾವ್ಯ: ಶುಭೋದಯ ಹಿಂದೂ ಸೇವಾ ಟ್ರಸ್ಟ್ (ರಿ.) ಸಾವ್ಯ ಇದರ ವತಿಯಿಂದ ದಿವಂಗತ ನಾಗೇಶ್ ಆಚಾರ್ಯ ಅವರ ಸವಿ ನೆನಪಿಗಾಗಿ ಅ.12 ರಂದು ಸಾವ್ಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರ ಮತ್ತು ಆಧಾರ್ ತಿದ್ದುಪಡಿ ಯೊಂದಿಗೆ ಹಲವು ಬಗೆಯ ಇನ್ಶೂರೆನ್ಸ್ ಗಳನ್ನು ಮಾಡುವ ಕಾರ್ಯಕ್ರಮ ನಡಯಿತು.

ಇದನ್ನೂ ಓದಿ: ⭕ಪುತ್ತೂರು: ಸಿಡಿಲು ಬಡಿದು ಕೂಲಿ ಕಾರ್ಮಿಕ ಮೃತ್ಯು

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾನ್ಯ ಶಾಸಕರಾದ ಹರೀಶ್ ಪೂಂಜ, ಸಾವ್ಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮ ಗಳು ಮಾದರಿಯಾಗುವ ಕಾರ್ಯಕ್ರಮಗಳು. ಮುಂದೆ ಸಾವ್ಯ ಗ್ರಾಮದಲ್ಲಿ ಕನಿಷ್ಠ 100 ದಿನ ಪ್ರತಿ ಮನೆಯಲ್ಲಿ, ಮನೆಯಲ್ಲಿಯೇ ಮಾಡಿದ ತರಕಾರಿ ಬಳಸುವ ರೀತಿ ಆಗುವಂತೆ ಕೇಳಿಕೊಂಡರು.


ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಪಂಚಾಯತ್ ಅಧ್ಯಕ್ಷ ರಾದ ನಿತಿನ್ ಅಂಡಿಂಜೆ ವಹಿಸಿ ಮಾತನಾಡಿ, ಮುಂದೆಯೂ ಇಂತಹ ಕಾರ್ಯಕ್ರಮ ಟ್ರಸ್ಟ್ ವತಿಯಿಂದ ಮುಂದುವರಿಯಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮ ದಲ್ಲಿ ಪಂಚಾಯತ್ ಸದಸ್ಯರಾದ ಹರೀಶ್ ಹೆಗ್ಡೆ, ಸರೋಜ, ಸುಜಾತ, ಟ್ರಸ್ಟ್ ಅಧ್ಯಕ್ಷ ರಾದ ರಕ್ಷಿತ್ ಆರ್, ಕಾರ್ಯಕಾರಣಿ ಅಧ್ಯಕ್ಷ ರಾದ ಹರೀಶ್ ಮರೆಜಾರ್ ಭಾಗವಹಿಸಿದ್ದರು. ಟ್ರಸ್ಟ್ ನ ಮಹಿಳಾ ಘಟಕದ ಹೊಸ ತಂಡ ಇಂದು ಉದ್ಘಾಟನೆಗೊಂಡಿತು.

Leave a Reply

Your email address will not be published. Required fields are marked *