ಬೆಂಗಳೂರು (ಅ.14): ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪ್ರಯಾಣಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಲು ನೈಋತ್ಯ ರೈಲ್ವೆ (SWR) ಸಿಹಿಸುದ್ದಿ ನೀಡಿದೆ. ಹಬ್ಬದ ವೇಳೆ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ, ಹುಬ್ಬಳ್ಳಿ, ಮಂಗಳೂರು, ಯಶವಂತಪುರ ಮತ್ತು ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ಮಾರ್ಗಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಲಾಗಿದೆ. ಈ ವಿಶೇಷ ರೈಲುಗಳು ಅಕ್ಟೋಬರ್ 17 ರಿಂದ 19, 2025 ರವರೆಗೆ ಒಟ್ಟು ಆರು ಟ್ರಿಪ್‌ಗಳನ್ನು ಸಂಚರಿಸಲಿವೆ. ಈ ಮೂಲಕ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳುವ ಜನರಿಗೆ ರೈಲ್ವೆ ಇಲಾಖೆ ಭರ್ಜರಿ ನೆರವು ನೀಡಿದೆ.
South Western Railway has notified Special trains between Yesvantpur – Mangaluru Jn – Bangalore Cantonment to clear extra rush of passengers in view of Deepavali Festival
Advance Reservation for the above Festival Special Trains will open at 08.00 hrs on 13.10.2025 (Tomorrow)… pic.twitter.com/oHREu1IZVt
1. ಎಸ್.ಎಸ್.ಎಸ್. ಹುಬ್ಬಳ್ಳಿ – ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ (ತಲಾ 1 ಟ್ರಿಪ್)
ರೈಲು ಸಂಖ್ಯೆ
ಮಾರ್ಗ
ಪ್ರಯಾಣದ ದಿನಾಂಕ
ಹೊರಡುವ ಸಮಯ (Dep)
ತಲುಪುವ ಸಮಯ (Arr)
07353
ಎಸ್.ಎಸ್.ಎಸ್. ಹುಬ್ಬಳ್ಳಿ ಟು ಮಂಗಳೂರು ಜಂಕ್ಷನ್
ಅಕ್ಟೋಬರ್ 17, 2025
ಸಂಜೆ 4:00 ಗಂಟೆಗೆ
ಅಕ್ಟೋಬರ್ 18, ಬೆಳಗ್ಗೆ 11:15 ಗಂಟೆಗೆ
07354
ಮಂಗಳೂರು ಜಂಕ್ಷನ್ ಟು ಯಶವಂತಪುರ
ಅಕ್ಟೋಬರ್ 18, 2025
ಮಧ್ಯಾಹ್ನ 2:35 ಗಂಟೆಗೆ
ಅದೇ ದಿನ ರಾತ್ರಿ 11:15 ಗಂಟೆಗೆ
2. ಯಶವಂತಪುರ – ಮಂಗಳೂರು ಜಂಕ್ಷನ್ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (ತಲಾ 1 ಟ್ರಿಪ್)
ರೈಲು ಸಂಖ್ಯೆ
ಮಾರ್ಗ
ಪ್ರಯಾಣದ ದಿನಾಂಕ
ಹೊರಡುವ ಸಮಯ (Dep)
ತಲುಪುವ ಸಮಯ (Arr)
06229
ಯಶವಂತಪುರ ಟು ಮಂಗಳೂರು ಜಂಕ್ಷನ್
ಅಕ್ಟೋಬರ್ 19, 2025
ಮಧ್ಯಾಹ್ನ 12:15 ಗಂಟೆಗೆ
ಅದೇ ದಿನ ರಾತ್ರಿ 11:15 ಗಂಟೆಗೆ
06230
ಮಂಗಳೂರು ಜಂಕ್ಷನ್ ಟು ಬೆಂಗಳೂರು ಕಂಟೋನ್ಮೆಂಟ್
ಅಕ್ಟೋಬರ್ 19, 2025
ಮಧ್ಯಾಹ್ನ 2:35 ಗಂಟೆಗೆ
ಅಕ್ಟೋಬರ್ 20, ಬೆಳಗಿನ ಜಾವ 12:30 ಗಂಟೆಗೆ
3. ಬೆಳಗಾವಿ – ಎಸ್.ಎಂ.ವಿ.ಟಿ. ಬೆಂಗಳೂರು – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (ತಲಾ 1 ಟ್ರಿಪ್)
ರೈಲು ಸಂಖ್ಯೆ
ಮಾರ್ಗ
ಪ್ರಯಾಣದ ದಿನಾಂಕ
ಹೊರಡುವ ಸಮಯ (Dep)
ತಲುಪುವ ಸಮಯ (Arr)
06507
ಬೆಳಗಾವಿ ಟು ಎಸ್.ಎಂ.ವಿ.ಟಿ. ಬೆಂಗಳೂರು
ಅಕ್ಟೋಬರ್ 18, 2025
ಬೆಳಗ್ಗೆ 8:00 ಗಂಟೆಗೆ
ಅದೇ ದಿನ ರಾತ್ರಿ 7:45 ಗಂಟೆಗೆ
06508
ಎಸ್.ಎಂ.ವಿ.ಟಿ. ಬೆಂಗಳೂರು ಟು ಬೆಳಗಾವಿ
ಅಕ್ಟೋಬರ್ 18, 2025
ರಾತ್ರಿ 9:00 ಗಂಟೆಗೆ
ಅಕ್ಟೋಬರ್ 19, ಬೆಳಗ್ಗೆ 8:35 ಗಂಟೆಗೆ
ಸೂಚನೆ: ಪ್ರಯಾಣಿಕರು ಈ ವಿಶೇಷ ರೈಲುಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ನಿಲುಗಡೆಗಳ ವಿವರವನ್ನು ನೈಋತ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ ರೈಲು ನಿಲ್ದಾಣಗಳಲ್ಲಿ ಪಡೆಯಬಹುದು. ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಸೇವೆಗಳು ಈಗಾಗಲೇ ಲಭ್ಯವಿದೆ.