Sat. Oct 18th, 2025

Ujire: ಉಜಿರೆ ಎಸ್.ಡಿ.ಎಂ ಪಿ ಯು ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಕಾರ್ಯಾಗಾರ

ಉಜಿರೆ:(ಅ.೧೮) ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಜೂನಿಯರ್ ರೆಡ್ ಕ್ರಾಸ್ ಆಶ್ರಯದೊಂದಿಗೆ ಮಂಗಳೂರಿನ ನಿಟ್ಟೆ ಉಷಾ ನರ್ಸಿಂಗ್ ಸೈನ್ಸ್ ಕಾಲೇಜಿನ ಎನ್ ಎಸ್ ಎಸ್ ಘಟಕದ ಸಹಯೋಗದೊಂದಿಗೆ ಆಪತ್ಬಂಧು ಪ್ರಥಮ ಚಿಕಿತ್ಸೆ ಮತ್ತು ತುರ್ತು ಸೇವೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಮಂಗಳೂರು ನಿಟ್ಟೆ ಉಷಾ ನರ್ಸಿಂಗ್ ಸೈನ್ಸ್ ಕಾಲೇಜಿನ ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಾ. ನೀತಾ ಕಾಮತ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಪ್ರಥಮ ಚಿಕಿತ್ಸೆ ತರಬೇತಿಯಿಂದ ವ್ಯಕ್ತಿಗೆ ತಕ್ಷಣ ಧೈರ್ಯ ತುಂಬಲು ಸಾಧ್ಯವಾಗುತ್ತದೆ. ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಬಹಳ ಸಹಾಯಕ ಇಂತಹ ತರಬೇತಿ ಪಡೆದು ಇನ್ನೊಬ್ಬರ ತುರ್ತು ಸೇವೆಗೆ ಆಪತ್ಬಂಧುಗಳಾಗಬೇಕು ” ಎಂದು ಹೇಳು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ  " ಕಾಲೇಜಿನ ಎನ್ ಎಸ್ ಎಸ್ ಘಟಕ ಹಲವಾರು ತರಬೇತಿ ಕಾರ್ಯಾಗಾರ ನಡೆಸುತ್ತಿದ್ದು ಈ ಪ್ರಥಮ ಚಿಕಿತ್ಸೆ ಕಾರ್ಯಾಗಾರ ಬಹಳ ಮಹತ್ವವಾದುದು. ಈ ಕಾರ್ಯಾಗಾರದಲ್ಲಿ ಕಲಿತ ತರಬೇತಿಯನ್ನು ಸರಿಯಾದ ಸಂದರ್ಭದಲ್ಲಿ ಬಳಸಿ ಸದ್ಭಾಳಕೆ  ಮಾಡಿಕೊಳ್ಳಬೇಕು "

ಎಂದು ಹೇಳಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ, ರೆಡ್ ಕ್ರಾಸ್ ಯೋಜನಾಧಿಕಾರಿಗಳಾದ ಅರ್ಚನಾ, ಕವನಶ್ರೀ ಜೈನ್ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೆ ಉಷಾ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸರಿತಾ ಟೆಲ್ಮಾ ಫೆರ್ನಾಂಡಿಸ್, ಶ್ರೀಮತಿ ಜೀವಿತಾ ಆಳ್ವ, ಸುಕೇಶ್ ಶೆಟ್ಟಿ,ಶ್ರೀಮತಿ ಕೀರ್ತಿಮಾಲಾ ಭಾಗವಹಿಸಿದ್ದರು.
ಸ್ವಯಂ ಸೇವಕಿ ಧ್ವನ್ಯನಿರೂಪಿಸಿ ಭವಿಷ್ಯ ರಾಣಿ ಸ್ವಾಗತಿಸಿ ನಿಟ್ಟೆ ಉಷಾ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಾಧ್ಯಾಪಕಿ ಕೀರ್ತಿ ಮಾಲಾ ವಂದಿಸಿದರು. ಆರಾಧ್ಯ ಅತಿಥಿಗಳ ಪರಿಚಯಿಸಿದರು.

Leave a Reply

Your email address will not be published. Required fields are marked *