Wed. Oct 29th, 2025

Belthangady: ಬಾರ್ಯ ಪ್ರಾ.ಕೃ.ಪ. ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

ಬೆಳ್ತಂಗಡಿ : ಬಾರ್ಯ ಕೃಷಿಪತ್ತಿನ ಸಹಕಾರಿ ಸಂಘ(ನಿ.) ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನವೆಂಬರ್ 05 ನಡೆಯಲಿದೆ.

ಇದನ್ನೂ ಓದಿ: 🔴ಬಂದಾರು: ಇತ್ತೀಚೆಗೆ ಹೃದಯಘಾತದಿಂದ ಮೃತರಾದ ಕುಕ್ಕಪ್ಪ ಗೌಡರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಆ ಪ್ರಯುಕ್ತ ಕಾರ್ಯಕರ್ತರ ಪೂರ್ವಭಾವಿ ಕಾರ್ಯಕರ್ತರ ಸಭೆಯಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಭಾಗವಹಿಸಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 12 ಅಭ್ಯರ್ಥಿ ಅಭ್ಯರ್ಥಿಗಳು ಗೆಲುವಿನ ಬಗ್ಗೆ ವಿವಿಧ ಜವಾಬ್ದಾರಿ ನೀಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಭಾರಿಗಳಾದ ಸುಂದರ ಹೆಗ್ಡೆ ವೇಣೂರು, ತಣ್ಣೀರುಪಂತ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಜಯಾನಂದ ಕಲ್ಲಾಪು,

ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ, ಪ್ರಮುಖರಾದ ಪ್ರಸನ್ನ ಗೌಡ ಪುತ್ತಿಲ, ಪ್ರವೀಣ್ ರೈ, ಪ್ರಶಾಂತ್ ಪೈ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್, ಬಾರ್ಯ ಶಕ್ತಿಕೇಂದ್ರದ ಪ್ರಮುಖರು, ಬೂತ್ ಪ್ರಮುಖರು ಮತ್ತು ಅಭ್ಯರ್ಥಿಗಳು, ಜನಪ್ರತಿನಿದಿನಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *