ಬೆಂಗಳೂರು (ನ.03): ಎಂಥೆಂಥಾ ಜನರಿದ್ದಾರೆ ಅಂದ್ರೆ ಬೆಂಗಳೂರಲ್ಲಿ ಮಹಿಳೆಯೋರ್ವಳು ಪುಟ್ಟ ನಾಯಿ ಮರಿ ಮೇಲೂ ಕ್ರೌರ್ಯ ಮೆರೆದಿದ್ದಾಳೆ. ಲಿಫ್ಟ್ನಲ್ಲಿ ಎರಡು ನಾಯಿ ಮರಿಯನ್ನ ಕರೆದುಕೊಂಡು ಹೋಗ್ತಿದ್ದ ಕೆಲಸದ ಮಹಿಳೆ ಒಂದು ನಾಯಿ ಮರಿಯನ್ನ ಬಟ್ಟೆ ಒಗೆದಂತೆ ಹೊಡೆದು ಲಿಫ್ಟ್ನಲ್ಲೇ ಕೊಲೆ ಮಾಡಿದ್ದಾಳೆ. ಈ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: 🟣ಉಜಿರೆ: ಕಲಾ ಸಿಂಚನ 2025
ನಾಯಿ ಮರಿ ಕೊಂದಳು ಮನೆಗೆಲಸದಾಕೆ
ಅಕ್ಟೋಬರ್ 31ರಂದು ಬಾಗಲೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ರಾಶಿ ಎಂಬಾಕೆ ತಾನು ಸಾಕಿದ ನಾಯಿಗಳನ್ನು ನೋಡಿಕೊಳ್ಳೋಕೆ ಅಂತಾನೇ ಕೆಲಸದ ಮಹಿಳೆಯನ್ನು ನೇಮಕ ಮಾಡಿದ್ರಂತೆ. ಆದ್ರೆ ಈ ಮನೆಕೆಲಸದಾಕೆ ಕ್ರೂರವಾಗಿ ಪುಟ್ಟ ನಾಯಿ ಮರಿಯನ್ನೇ ಕೊಂದಿದ್ದಾಳೆ.

ಎಳೆದು, ಎಸೆದು, ಕೊಂದ ಮಹಿಳೆ
ಕ್ಯೂಟ್, ಕ್ಯೂಟ್ ಆಗಿದ್ದ ಎರಡು ಡಾಗ್ಗಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಬಂದ ಮಹಿಳೆ ನೇರವಾಗಿ ಲಿಫ್ಟ್ ಏರಿದ್ದಾಳೆ. ಬಳಿಕ ಎರಡರಲ್ಲಿ ಒಂದು ನಾಯಿ ಮರಿಯನ್ನ ಜೋರಾಗಿ ಎಳೆದು, ಎಸೆದು ಕೊಂದಿದ್ದಾಳೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿಯಲ್ಲಿ ಬಯಲಾಯ್ತು ದೃಶ್ಯ
ನಾಯಿ ಸಾಕೋಕೆ ಅಂತಾನೆ ಸಂಬಳ ಕೊಡ್ತಿದ್ದ ಮಾಲೀಕರು, ಮನೆಗೆಲಸದವಳು ಮಾಡಿದ ಕೆಲಸ ನೋಡಿ ಶಾಕ್ ಆಗಿದ್ದಾರೆ. ಕ್ರೂರರಿಗೂ ಕರುಣೆ ಹುಟ್ಟಿಸುತ್ತೆ ನಾಯಿಯನ್ನ ಕೊಂದ ಈ ದೃಶ್ಯ. ಆ ಮೂಕ ಜೀವಿ ಈ ಮಹಿಳೆಗೆ ಏನ್ ಮಾಡಿತ್ತು ಎಂದು ಸ್ಥಳೀಯರು ಛೀಮಾರಿ ಹಾಕ್ತಿದ್ದಾರೆ.


ಕೆಲಸಕ್ಕೆಂದು ಸೇರಿದ ಪುಷ್ಪಲತಾ ಅನ್ನೋ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಮುದ್ದಾದ ಗೂಫಿ ಅನ್ನೋ ಶ್ವಾನವನ್ನು ಕೊಂದು ಮಹಿಳೆ ಅಳುವಂತೆ ನಾಟಕವಾಡಿದ್ದಾಳೆ. ಘಟನೆ ಇಂಚಿಂಚು ದೃಶ್ಯ CCTV ಅಲ್ಲಿ ಸೆರೆಯಾಗಿದೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗ್ತಿದೆ. ಈ ಸಂಬಂಧ ಮಹಿಳೆ ದೂರು ನೀಡಿದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.


