Bigg Boss: ” ಯಾರ ಮೇಲೆ ಯಾರೂ ಹಲ್ಲೆ ಮಾಡಬಾರದು” ಎಂಬುದು ಬಿಗ್ ಬಾಸ್ನ ಮೂಲ ನಿಯಮಗಳಲ್ಲಿ ಒಂದು. ಈ ರೀತಿ ಮಾಡಿದರೆ ಆ ಕ್ಷಣವೇ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ⭕Bengaluru: ಲಿಫ್ಟ್ ನಲ್ಲೇ ನಾಯಿ ಮರಿಯನ್ನು ಹೊಡೆದು ಕೊಂದ ಮಹಿಳೆ
ಈ ಮೊದಲು ಬಿಗ್ ಬಾಸ್ನಲ್ಲಿ ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ಕಳೆದ ಸೀಸನ್ನಲ್ಲಿ ರಂಜಿತ್ ಅವರು ಇದೇ ರೀತಿ ಮಾಡಿ ಮನೆಯಿಂದ ಹೊರ ಹೋಗಿದ್ದರು. ಈಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರನ್ನು ಎಲಿಮಿನೇಟ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ರಿಷಾ ಅವರ ಬಳಿ ಬಕೆಟ್ ಕೊಡುವಂತೆ ಗಿಲ್ಲಿ ಅವರು ಬಾತ್ರೂಂನಲ್ಲಿ ಮನವಿ ಮಾಡಿದ್ದಾರೆ. ಆದರೆ, ರಿಷಾ ಇದಕ್ಕೆ ಬಗ್ಗಲಿಲ್ಲ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಹೊರಟ ಗಿಲ್ಲಿ ಅವರು, ರಿಷಾ ಅವರ ಬಟ್ಟೆಯನ್ನು ತಂದು ಬಾತ್ರೂಂ ಹೊರ ಭಾಗದಲ್ಲಿರುವ ನೆಲದ ಮೇಲೆ ಹಾಕಿದ್ದಾರೆ. ಇದು ರಿಷಾ ಕೋಪಕ್ಕೆ ಕಾರಣ ಆಗಿದೆ. ‘ಗಿಲ್ಲಿ’ ಎಂದು ಕೂಗುತ್ತಾ ಬಂದ ಅವರು, ಗಿಲ್ಲಿಗೆ ಹೊಡೆದಿದ್ದಾರೆ.

ಇಷ್ಟಕ್ಕೆ ರಿಷಾ ನಿಲ್ಲಲಿಲ್ಲ. ರಿಷಾ ಅವರು ಗಿಲ್ಲಿ ಮೇಲೆ ಕೂಗಾಡಿದ್ದಾರೆ. ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಿದಾಗ ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಈ ಬಾರಿಯೂ ಅದೇ ರೀತಿ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.




