ಉಜಿರೆ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಂಘದ ವತಿಯಿಂದ ಕನ್ನಡ ಸಂವರ್ಧನೆ ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಮ್ನಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ.ವಿಜಯ್ ಲೋಬೋ ವಹಿಸಿ ಕನ್ನಡ ಭಾಷೆಯು ಸಮುದಾಯಗಳ ನಡುವೆ ಭಾಂದವ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿ ಶುಭ ಹಾರೈಹಿಸಿದರು.

ಇದನ್ನೂ ಓದಿ: 🟣ಬೆಳ್ತಂಗಡಿ : ಶಿಬಾಜೆ ನಾರಾಯಣಗುರು ಮಂದಿರಕ್ಕೆ ರಕ್ಷಿತ್ ಶಿವರಾಂರವರಿಂದ ಬಾಗಿಲು ಹಸ್ತಾಂತರ
ಸಂಪನ್ಮೂಲ ವ್ಯಕ್ತಿಯಾಗಿ ಸೇಕ್ರೇಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ವಸಂತ್ ಬಿ.ಶೆಟ್ಟಿ ಮಾತನಾಡಿ ಕನ್ನಡ ಭಾಷೆಯು ಶ್ರೀಮಂತ ಹಾಗು ಪ್ರಭುದ್ದ ಭಾಷೆ ವಿದ್ಯಾರ್ಥಿಗಳಾದ ತಾವು ಕನ್ನಡ ಕಾದಂಬರಿಗಳು,ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮೆಲ್ಲರ ಕೊಡುಗೆ ಅಮೂಲ್ಯ ಎಂದು ಹೇಳಿದರು.

ಕನ್ನಡ ಸಂಘದ ನಿರ್ದೇಶಕರಾದ ಅರುಣ್ ಕಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ವೇದಿಕೆಯಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಶಾಬಿರ ಉಪಸ್ಥಿತರಿದ್ದರು. ಜೊತೆಕಾರ್ಯದರ್ಶಿ ಕ್ರಿಸ್ಟಿನ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಮನ್ಹ ವಂದಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಕುರಿತ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.




