ಮಂಗಳೂರು: ವ್ಯಾಟಿಕನ್ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾ.ಆ್ಯಂಡ್ರಿಯಾ ಫಾನ್ರಿಯಾ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಇತಿಹಾಸದ ಬಗ್ಗೆ ಮಾಹಿತಿ ಪಡೆದ ಅವರು ಹರ್ಷ ವ್ಯಕ್ತಪಡಿಸಿದರು.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರು ಫಾ.ಜೋಸೆಫ್, ಬಿಜು ಎಂ. ಜೋಸೆಫ್ ಮಂಗಳೂರು, ಮನೋಜ್ ಜತೆಗಿದ್ದರು. ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಕಾರ್ಪೋರೆಟರ್ ಪ್ರವೀಣ್ಚಂದ್ರ ಆಳ್ವ, ದಿನೇಶ್ ಅಂಚನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.





