ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದಿಂದ ಸ್ಕೌಟ್ ಗೈಡ್ ಸಂಸ್ಥಾಪಕರ ದಿನಾಚರಣೆ ಹಾಗೂ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: 🟣ಉಜಿರೆ: ಉಜಿರೆಯ ಶ್ರೀ ಧ.ಮಂ.ಪ.ಪೂ.ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ತಾರಾ ಕೇಸರಿ ಅವರು ಆಗಮಿಸಿದ್ದರು. ರಾಷ್ಟ್ರೀಯ ಹಾಗೂ ರಾಜ್ಯ ಸಂಸ್ಥೆ ಬೆಂಗಳೂರು ನೀಡಲ್ಪಟ್ಟ ಧ್ವಜದ ಚೀಟಿಯನ್ನು ಬಿಡುಗಡೆಗೊಳಿಸಿದರು. ಅಲ್ಲದೆ ಹೊಸತಾಗಿ ಸ್ಕೌಟ್ ಗೈಡ್ ತರಬೇತಿಯನ್ನು ಪಡೆದು ಬಂದಂತಹ ಗೈಡ್ ಶಿಕ್ಷಕಿಯರಾದ ಅಮಿತಾ, ಸೌಮ್ಯ, ಮೋಹಿನಿ , ಪುಷ್ಪಲತಾ ಇವರಿಗೆ ಸ್ಕಾಪ್೯ ತೊಡಿಸಿ ಅಭಿನಂದನೆಯನ್ನು ಸೂಚಿಸಿದರು. ಶಿಕ್ಷಕಿಯರು ಪ್ರತಿಜ್ಞಾ ವಿಧಿ ನಿಯಮವನ್ನು ಸ್ವೀಕರಿಸಿದರು.


ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಶಿಕ್ಷಣಾಧಿಕಾರಿ ಯವರು ಸ್ಕೌಟ್ ಗೈಡ್ ಗಳಿಂದ ಶಿಸ್ತು, ನಾಯಕತ್ವ ಗುಣ ವೃದ್ಧಿಯಾಗುವುದಲ್ಲದೆ ಸೇವೆಗೆ ಮೀಸಲಾಗಿರುವ ಸ್ಕೌಟ್ ಗೈಡ್ ಸಂಸ್ಥೆ ಯಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸಿಂತಾ ಉಪಸ್ಥಿತರಿದ್ದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ , ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಶಿಕ್ಷಕಿ ಪ್ರಮೀಳ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ನೇತೃತ್ವ ವಹಿಸಿ, ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನಾಡಿದರು. ಕಬ್ ಮಾಸ್ಟರ್ ನೀತಾ ಕೆ.ಎಸ್ ನಿರೂಪಿಸಿ , ಪ್ಲಾಕ್ ಲೀಡರ್ ಪ್ರಮೀಳಾ ಎನ್ ಧನ್ಯವಾದಕೋರಿದರು.
ಸ್ಕೌಟ್ ಮಾಸ್ಟರ್ ಗಳಾದ ರಮ್ಯಾ ಬಿ ಎಸ್, ಮಂಜುನಾಥ್, ಜಯರಾಮ್ , ಗೈಡ್ ಕ್ಯಾಪ್ಟನ್ ಕಾರುಣ್ಯ ಸಹಕರಿಸಿದ ಕಾರ್ಯಕ್ರಮದಲ್ಲಿ ಬನ್ನಿಸ್, ಕಬ್ ಬುಲ್ ಬುಲ್ಸ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



