ಮಲೆಂಗಲ್ಲು: (ನ.೮) ಕಣಿಯೂರು ಗ್ರಾಮ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವರ ಬ್ರಹ್ಮಕಲಶೋತ್ಸವ
01/03/2026 ರಿಂದ 06/03/2026 ವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವದ ಸಮಿತಿ ಪುನರ್ ರಚನೆ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ: 🔴ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ
ಗೌರವ ಮಾರ್ಗದರ್ಶಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಗೌರವಾಧ್ಯಕ್ಷರಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ,
ಅಧ್ಯಕ್ಷರಾಗಿ ವಿಠಲ ಶೆಟ್ಟಿ ಕೊಲ್ಲೋಟ್ಟು, ಪ್ರಧಾನ ಸಂಚಾಲಕರಾಗಿ ಹರ್ಷ ಮೇಲಾಂಟ ಮುಗೆರೋಡಿ, ಕಾರ್ಯಾಧ್ಯಕ್ಷರಾಗಿ ನಾರಾಯಣ ಗೌಡ ಮಚ್ಚೂರು,ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಮಲೆಂಗಲ್ಲು,

ಕಾರ್ಯದರ್ಶಿಗಳಾಗಿ ರಘುಪತಿ ಭಟ್ ಅನಾಬೆ, ಧನ್ಯ ಕುಮಾರ್ ಪದ್ಮುಂಜ,ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಅನಿತಾ ಕೇಶವ ಅಡೆಂಜ, ಶ್ರೀಮತಿ ಗೀತಾ ಸುನಿಲ್ ಶೆಟ್ಟಿ ಪುದ್ದೋಟ್ಟು,ಕೋಶಾಧಿಕಾರಿಯಾಗಿ ಉದಯ ಕುಮಾರ್ ಮೇಲಾಂಟ ಮುಗೆರೋಡಿ, ಉಪಾಧ್ಯಕ್ಷರಾಗಿ ಕಿರಣ್ ಚಂದ್ರ.ಡಿ. ಪುಷ್ಪಗಿರಿ, ಎಸ್.ಕೆ.ಡಿ.ಆರ್.ಡಿ. ಪಿ ಗುರುವಾಯನಕೆರೆ ಕ್ಷೇತ್ರ ಯೋಜನಾಧಿಕಾರಿ ಅಶೋಕ್ ಪೂಜಾರಿ, ಧನಂಜಯ ಕುರಾಯ, ಮೋಹನ್ ಗೌಡ ಪದ್ಮುಂಜ, ಭೋಜ ಶೆಟ್ಟಿ ಪಣೆಕ್ಕರ,

ಗೌರವ ಸಲಹೆಗಾರರಾಗಿ ರಕ್ಷಿತ್ ಶಿವರಾಂ, ಸುದರ್ಶನ್ ಹೆಗ್ಡೆ ಕಣಿಯೂರು, ಯೋಗೀಶ್ ಪೂಜಾರಿ ಕಡ್ತಿಲ, ಲಕ್ಷ್ಮೀಶ ಮೇಲಾಂಟ ಮುಗೆರೋಡಿ, ಡಾ. ಸಂತೋಷ್ ರಾವ್ ಸಿಂಧೂರ ಮುಂಡ್ರುಪ್ಪಾಡಿ, ಶಿವರಾಮ್ ಭಟ್ ಕುಮೇರ್, ಪದ್ಮನಾಭ ಗೌಡ ಕುದುಮರ, ಮಹಾವೀರ ಅಜ್ರಿ ಕಣಿಯೂರು, ಬಾಬು ಗೌಡ ಪೋಯ್ಯ, ರಾಮಣ್ಣ ಆಚಾರ್ಯ, ಸುಂದರ ಗಾಳಿಗುಡ್ಡೆ, ವಿಶ್ವನಾಥ ಅಂಬಡ್ಕ,ಶ್ರೀಮತಿ ಭಾರತಿ ನನ್ಯ, ಯೋಗೀಶ್ ಕಜೆ, ಜಗದೀಶ್ ಕಜೆ, ಅಶೋಕ್ ಅಡೆಂಜ, ದಿನೇಶ್ ಶೆಟ್ಟಿ ಕಣಿಯೂರು, ಶಂಭು ರೈ ಮುಗೆರೋಡಿ ಹಾಗೂ ವಿವಿಧ ಸಮಿತಿಗಳ ಸಂಚಾಲಕ ಮತ್ತು ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆಡಳಿತ ಸಮಿತಿ, ಸೇವಾ ಸಮಿತಿ ಜೀರ್ಣೋದ್ಧಾರ ಸಮಿತಿ ಹಾಗೂ ಊರಿನ ಭಕ್ತಾದಿಗಳ ಸಮ್ಮುಖದಲ್ಲಿ ಸಮಿತಿಯನ್ನು ರಚನೆ ಮಾಡಲಾಯಿತು.



