Sat. Nov 8th, 2025

Haveri: ಪ್ರೀತಿ-ಪ್ರೇಮ ಅಂತ ಗರ್ಭಿಣಿ ಮಾಡಿ ಕೈಕೊಟ್ಟ – ಕೊನೆಗೆ ಆಗಿದ್ದೇನು ಗೊತ್ತಾ..?

ಹಾವೇರಿ (ನ.08): ಪ್ರೀತಿ-ಪ್ರೇಮ ಅಂತ 4 ವರ್ಷ ಯುವತಿ ಜೊತೆ ಊರು-ಊರು ಸುತ್ತಿ, ಬಳಿಕ ಗರ್ಭಿಣಿ ಮಾಡಿ ಕೈಕೊಟ್ಟಿದ್ದಾನಂತೆ.

ಇದನ್ನೂ ಓದಿ: ⭕Anekal: ಮೂವರು ಮಕ್ಕಳ ತಾಯಿಯ ಸಲಿಂಗ ಕಾಮದಾಹಕ್ಕೆ 5 ತಿಂಗಳ ಶಿಶು ಬಲಿ

ಯುವಕ ಮದುವೆಗೆ ನಿರಾಕರಿಸಿದ ಎಂದು ಮನನೊಂದ 3 ತಿಂಗಳ ಗರ್ಭಿಣಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಹಾವೇರಿ ಶಂಕರಿಪುರ ಗ್ರಾಮದಲ್ಲಿ ನಡೆದಿದೆ. ಯುವತಿ ಸಾವಿಗೆ ಪೋಷಕರು ಆಕ್ರೋಶ ಹೊರಹಾಕಿದ್ದು, ಯುವಕನ ಮನೆಯೆದುರು ಶವವಿಟ್ಟು ಪ್ರತಿಭಟನೆ ಮಾಡ್ತಿದ್ದಾರೆ.

ಗರ್ಭಿಣಿ ಮಾಡಿ ಕೈಕೊಟ್ಟ ಯುವಕ
ಹಾವೇರಿಯ ಶಂಕರಿಪುರ ಗ್ರಾಮದ 24 ವರ್ಷದ ಸಿಂಧೂ ಪರಮೇಶಪ್ಪ ಎಂಬ ಯುವತಿ 4 ವರ್ಷಗಳಿಂದ ಶರತ್‌ ಕುಮಾರ್​ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಪ್ರೀತಿ-ಪ್ರೇಮ ಅಂತ ಆಕೆಯ ಜೊತೆ ಓಡಾಡ್ತಿದ್ದ ಶರತ್​, ಸಿಂಧು ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗ್ತಿದೆ. ಸಿಂಧೂ ಗರ್ಭಿಣಿ ಎನ್ನುವ ವಿಚಾರ ತಿಳಿದು ವರಸೆ ಬದಲಿದ್ದಾನಂತೆ.

ಕುಟುಂಬಸ್ಥರೇ ಕೇಳಿದ್ರೂ ಒಪ್ಪದ ಯುವಕ
ಸಿಂಧೂ ಗರ್ಭಿಣಿಯಾದ ಬಳಿಕ ಈತ ಮದುವೆಯಾಗಲ್ಲ ಎಂದಿದ್ದನಂತೆ. ಈ ವಿಚಾರ ಸಿಂಧೂ ಕುಟುಂಬಸ್ಥರಿಗೂ ಗೊತ್ತಾಗಿದೆ. ಬಳಿಕ ರಾಜಿ-ಸಂಧಾನ ಮಾಡಿದ್ದಾರೆ. ಮಗಳನ್ನ ಮದುವೆಯಾಗುವಂತೆ ಕೇಳಿದ್ರು ಆತ ಒಪ್ಪಲಿಲ್ಲ ಎನ್ನಲಾಗ್ತಿದೆ.

‘ಮಲಗೋ ಮುನ್ನ ಯೋಚಿಸಬೇಕಿತ್ತು’
ಗರ್ಭಿಣಿಯಾದ ಸಿಂಧೂ, ತನ್ನನ್ನು ಮದುವೆಯಾಗುವಂತೆ ಶರತ್​ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಇಬ್ಬರ ಮೆಸೇಜ್​ಗಳು ರಿವೀಲ್ ಆಗಿದೆ. ಆದ್ರೆ ಈತ, ನೀನು ಮಲಗೋ ಮುಂಚೆ ಯೋಚನೆ ಮಾಡಬೇಕಿತ್ತು ಎಂದೆಲ್ಲಾ ಮೆಸೇಜ್ ಮಾಡಿದ್ದಾನೆ ಎನ್ನಲಾಗ್ತಿದೆ.ನೇಣು ಬಿಗಿದುಕೊಂಡು ಯುವತಿ ಸೂಸೈಡ್​
ನನ್ನ ಲೈಫ್ ನಿನ್ನ ಕೈಯಲ್ಲಿದೆ. ನಿತ್ಯ ಕಣ್ಣೀರು ಹಾಕ್ತಿದ್ದೀನಿ ಎಂದು ಸಿಂಧೂ ಟೆಕ್ಸ್ಟ್ ಮಾಡಿದ್ದಾಳೆ. ಇದಕ್ಕೆ ಶರಣ್​ ಪ್ರೀತಿ ಮಾಡಬೇಕಾದ್ರೆ ಯೋಚನೆ ಮಾಡಬೇಕಿತ್ತು ಎಂದು ಹೇಳಿ ಅಸಡ್ಡೆ ತೋರಿದ್ದ ಎಂದು ತಿಳಿದು ಬಂದಿದೆ. ಯುವಕ ಮದುವೆಗೆ ನಿರಾಕರಿಸಿದ ಬಳಿಕ ಮನೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಯುವತಿ ಸಿಂಧೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Leave a Reply

Your email address will not be published. Required fields are marked *