Mahanati Winner Vamshi : ಯುವನಟಿಯರನ್ನು ಕನ್ನಡ ಸಿನಿರಂಗಕ್ಕೆ ಪರಿಚಯಿಸುವ ವಿಭಿನ್ನ ಕಾರ್ಯಕ್ರಮವೇ ‘ಮಹಾನಟಿ’ (Mahanati Season 2). ಇದೇ ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆದಿದೆ.

ಇದನ್ನೂ ಓದಿ: 🔆ಧರ್ಮಸ್ಥಳ: (ನ.15- 19) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ
ಅಂತೂ ವಿನ್ನರ್ ಅನೌನ್ಸ್ ಆಗಿದೆ. ಇದೀಗ ಮಹಾನಟಿ ಸೀಸನ್-2ರ ವಿಜೇತರಾಗಿ ಮಂಗಳೂರಿನ ವಂಶಿ ಹೊರಹೊಮ್ಮಿದ್ದಾರೆ. ಮಾನ್ಯ ರಮೇಶ್, ವರ್ಷಾ , ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಫೈನಲಿಸ್ಟ್ಗಳಾಗಿದ್ದರು.
ಮಹಾನಟಿ ಸೀಸನ್- ಮಂಗಳೂರಿನ ವಂಶಿ ರತ್ನಾಕರ್ ವಿಜಯಶಾಲಿಯಾಗಿದ್ದಾರೆ. ವೈಟ್ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ. ಮಹಾನಟಿ ಸೀಸನ್-2ರ ಮೊದಲ ರನ್ನರ್ ಅಪ್ ಬೆಳಗಾವಿಯ ವರ್ಷಾ ಆಗಿದ್ದಾರೆ. ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ಸಿಕ್ಕಿದೆ. ಮಹಾನಟಿ ಸೀಸನ್-2ರ ಎರಡನೇ ರನ್ನರ್ ಅಪ್ ಮೈಸೂರಿನ ಶ್ರೀಯ ಅಗಮ್ಯ ಅವರಿಗೆ ಸಿಕ್ಕಿದೆ.





