Mon. Nov 17th, 2025

Bride-To-Be Killed By Fiance Hour Before Wedding After Fight Over Saree: ತಾಳಿ ಕಟ್ಟುವ 1 ಗಂಟೆ ಮುಂಚೆ ಸೀರೆ ವಿಚಾರಕ್ಕೆ ವಧುವನ್ನು ಕೊಂದ ವರ

ಅಹ್ಮದಾಬಾದ್ : ತಾಳಿ ಕಟ್ಟಲು ಕೆಲವೇ ಕ್ಷಣ ಇರುವಾಗ ಏನೇನೋ ಘಟನೆಗಳು ಸಂಭವಿಸಿ ಬಿಡುತ್ತವೆ. ವಧು ಓಡಿ ಹೋಗಬಹುದು, ಇನ್ಯಾರೋ ಹಳೆಯ ಪ್ರೇಮಿ ಬಂದು ಮದುವೆ ನಿಲ್ಲಿಸಬಹುದು, ವರದಕ್ಷಿಣೆ ಕೊಟ್ಟಿಲ್ಲವೆಂದು ಮದುವೆ ಮುರಿದುಬೀಳಬಹುದು. ಆದರೆ, ಗುಜರಾತ್​ನ ಭಾವನಗರ್ ಎಂಬಲ್ಲಿ ಸೀರೆ ವಿಚಾರವೊಂದು ವರನಿಂದ ವಧು ಹತ್ಯೆಯಾಗಲು ಕಾರಣವಾಗಿದೆ.

ಇದನ್ನೂ ಓದಿ: 🔰ಉಜಿರೆ : ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ

ಹತ್ಯೆಯಾಗಿರುವ ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್. ಈಕೆಯನ್ನು ಕೊಂದ ಆರೋಪ ಎದುರಿಸುತ್ತಿರುವ ವರನ ಹೆಸರು ಸಾಜನ್ ಬರೇಯ. ಘಟನೆ ನಡೆದಿರುವುದು ಗುಜರಾತ್​ನ ಭಾವನಗರ್​ನ ಪ್ರಭುದಾಸ್ ಲೇಕ್​ನಲ್ಲಿನ ತೇಕ್ರಿ ಚೌಕ್ ಎಂಬಲ್ಲಿ. ತಾಳಿ ಕಟ್ಟಲು ಒಂದು ಗಂಟೆ ಇರುವಾಗ ವರ ಮತ್ತು ವಧುವಿನ ನಡುವೆ ಸೀರೆ ಹಾಗೂ ಹಣದ ವಿಚಾರಕ್ಕೆ ಜಗಳವಾಗಿದೆ. ಆ ವೇಳೆ, ಸೋನಿ ರಾಥೋಡ್​ಳನ್ನು ಸಾಜನ್ ಕೊಂದಿದ್ದಾನೆ ಎನ್ನಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.


ಸೋನಿ ಹಿಮ್ಮತ್ ರಾಥೋಡ್ ಮತ್ತು ಸಾಜನ್ ಬರೈಯ ಇಬ್ಬರೂ ಕೂಡ ಒಂದೂವರೆ ವರ್ಷಗಳಿಂದ ವಿಲಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದರು. ವಿವಾಹದ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು. ಸೀರೆ ಹಾಗೂ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೋಪದ ಭರದಲ್ಲಿ ಆರೋಪಿಯು ಕಬ್ಬಿಣದ ರಾಡ್​ನಿಂದ ಸೋನಿಗೆ ಬಡಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆಕೆಯ ತಲೆಯನ್ನು ಗೋಡೆಗೆ ಗುದ್ದಿಸಿದ್ದಾನೆ.

ಇಬ್ಬರೂ ವಾಸಿಸುತ್ತಿದ್ದ ಮನೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿಯೇ ಇಬ್ಬರ ವಿವಾಹ ಜರುಗುವುದಿತ್ತು. ಇಬ್ಬರೂ ಕೂಡ ತಮ್ಮ ಕುಟುಂಬಗಳ ವಿರೋಧ ಲೆಕ್ಕಿಸದೆ ಪ್ರೀತಿಸಿ, ಒಟ್ಟಿಗೆ ವಾಸವಿದ್ದರು. ಆರೋಪಿ ಸಾಜನ್ ತನ್ನ ಪ್ರಿಯತಮೆಯನ್ನು ಕೊಂದಿದ್ದು ಮಾತ್ರವಲ್ಲ, ನೆರೆಮನೆಯರೊಬ್ಬರ ಮೇಲೆಯೂ ಹಲ್ಲೆ ಮಾಡಿರುವ ಆರೋಪ ಇದೆ. ಎರಡೂ ಘಟನೆಗಳ ಸಂಬಂಧ ಆತನ ಮೇಲೆ ಪ್ರತ್ಯೇಕ ದೂರುಗಳು ದಾಖಲಾಗಿವೆ.

Leave a Reply

Your email address will not be published. Required fields are marked *