ಕಾಶಿಪಟ್ಣ: ಗರೋಡಿ ಫ್ರೆಂಡ್ಸ್ (ರಿ) ಕಾಶಿಪಟ್ಣ ಇದರ ಮುಂದಿನ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು, ಗರೋಡಿ ಫ್ರೆಂಡ್ಸ್ (ರಿ) ಕಾಶಿಪಟ್ಣ ಇದರ ಅಧ್ಯಕ್ಷರಾಗಿ ಯುವ ಉದ್ಯಮಿಗಳಾದ ಮನೋಜ್ ಕೋಟ್ಯಾನ್ ಆಯ್ಕೆಗೊಂಡರು ಹಾಗೂ ಉಪಾಧ್ಯಕ್ಷರಾಗಿ ಪ್ರದೀಪ್ ಕುಂಜಾಡಿ,

ಕಾರ್ಯದರ್ಶಿಯಾಗಿ ಶ್ರವಣ್ ಜೆ ಅಮೀನ್, ಜೊತೆ ಕಾರ್ಯದರ್ಶಿಯಾಗಿ ರಾಕೇಶ್ ಕೋಟ್ಯಾನ್ ಹಾಗೂ ಕೋಶಾಧಿಕಾರಿಯಾಗಿ ರಾಜೇಂದ್ರ ಸಾಲ್ಯಾನ್ ಮರಮ್ಮದೊಟ್ಟು ಆಯ್ಕೆಗೊಂಡರು. ಕ್ರೀಡಾ ಸಂಚಾಲಕರಾಗಿ ಪ್ರದೀಪ್ ಕಂಬಳದಡ್ಡ ಅವರನ್ನು ಆಯ್ಕೆಮಾಡಲಾಯಿತು ಹಾಗೂ ಸಮಿತಿಯ ಗೌರವ ಸಲಹೆಗರರಾಗಿ ಸುಬ್ಬಣ್ಣ ಸಾಲ್ಯಾನ್ ಹಾಗೂ ಸುಂದರ ಮುಗೆರಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಟೀಮ್ ಗರೋಡಿ ಫ್ರೆಂಡ್ಸ್ (ರಿ) ಕಾಶಿಪಟ್ಣ ಸಮಿತಿಯ ವತಿಯಿಂದ ನೂತನ ಸಮಿತಿಯ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳು ಸಲ್ಲಿಸಲಾಯಿತು.





