ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತನ್ನ 50ನೇ ವಾರ್ಷಿಕೋತ್ಸವವನ್ನು ‘ಸುವರ್ಣ ಮಹೋತ್ಸವ’ವಾಗಿ ಆಚರಿಸಿಕೊಂಡಿದೆ. ಇದನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 19, 2025 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದರು.

ಇದನ್ನೂ ಓದಿ: 🟡ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ
ಯುವಕರನ್ನು ಒಳಗೊಳ್ಳದೆ ಮಾಲಿನ್ಯ ನಿಯಂತ್ರಣ ಮಾಡುವುದು ಸಾಧ್ಯವೇ ಇಲ್ಲ ಎನ್ನುವುದನ್ನು ಮನಗೊಂಡು ಯುವಕರಿಗೆ ಪರಿಸರ ಜಾಗೃತಿ ಮೂಡಿಸುವ ಕುರಿತು ರೀಲ್ಸ್ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ, ಯುವಜನತೆ ಮನರಂಜನೆಯ ಜೊತೆಗೆ ಗಂಭೀರ ವಿಷಯಗಳ ಬಗ್ಗೆಯೂ ಜಾಗೃತಿ ಮೂಡಿಸಲು ಸಾಧ್ಯ ಎಂಬುದನ್ನು ದೀಕ್ಷಿತ್ ಧರ್ಮಸ್ಥಳ ಅವರು ಸಾಬೀತು ಮಾಡಿದ್ದಾರೆ. ರೀಲ್ಸ್ ಸ್ಪರ್ಧೆಯಲ್ಲಿ ದೀಕ್ಷಿತ್ ಧರ್ಮಸ್ಥಳ ಅವರು ತಮ್ಮ ಸೃಜನಶೀಲ ವಿಡಿಯೋ ಮೂಲಕ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.





