Sun. Nov 23rd, 2025

ಬೆಳ್ತಂಗಡಿ: ಇತ್ತೀಚೆಗೆ ರಿಕ್ಷಾ ಅಪಘಾತದಲ್ಲಿ ಮೃತರಾದ ತನ್ವಿತ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ಇತ್ತೀಚೆಗೆ ರಿಕ್ಷಾ ಅಪಘಾತದಲ್ಲಿ ಮೃತರಾದ ವಿದ್ಯಾರ್ಥಿ ನಾವೂರು ಗ್ರಾಮದ ತನ್ವಿತ್ ಅವರ ಮನೆಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಮೋರ್ತಾಜೆ,

ಬಿಜೆಪಿ ದ.ಕ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಗಣೇಶ್ ನಾವೂರು, ಶಕ್ತಿಕೇಂದ್ರ ಅಧ್ಯಕ್ಷರಾದ ಪ್ರದೀಪ್, ಮಂಡಲ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಗ್ರಾ.ಪಂ ಸದಸ್ಯರಾದ ಶ್ರೀ ಪ್ರಿಯ ಲಕ್ಷ್ಮಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *