ಬೆಳ್ತಂಗಡಿ: ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್, ಬೆಂಗಳೂರು ಇವರಿಂದ 2025–26ನೇ ಸಾಲಿನ ಸಿ.ಎಸ್.ಆರ್. ಯೋಜನೆಯಡಿ ಸಿಯೋನ್ ಆಶ್ರಮದ ನಿವಾಸಿಗಳಿಗಾಗಿ ಇಡ್ಲಿ ಸ್ಟೀಮರ್ ನ್ನು ಕೊಡುಗೆಯಾಗಿ ನೀಡಲಾಯಿತು.

ಇದನ್ನೂ ಓದಿ: ⭕ಅಶ್ವಿನಿ ಗೌಡ ಎದುರಲ್ಲೇ ಕಿಚ್ಚನ ಚಪ್ಪಾಳೆ ಪಡೆದ ರಕ್ಷಿತಾ ಶೆಟ್ಟಿ
ಇದರ ಉದ್ಘಾಟನಾ ಕಾರ್ಯಕ್ರಮವು ಸಿಯೋನ್ ಆಶ್ರಮದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್ನ ಪ್ರಮುಖರಾದ ಶ್ರೀಮತಿ ಆಗ್ನೇಸ್ ನೋಯೆಲ್ ಮಿರಾಂದರವರು ಉದ್ಘಾಟಿಸಿ, ಆಶ್ರಮದ ಅಭಿವೃದ್ಧಿಗೆ ಹಾರೈಸಿದರು.
ಈ ಸಂದರ್ಭದಲ್ಲಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ರವರು ಮಾತನಾಡಿ, ಮೂಗ್ ಇಂಡಿಯಾ ಸಂಸ್ಥೆಯ ಮಹತ್ಕಾರ್ಯ ಹಾಗೂ ಸೇವಾಭಾವಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಿಯೋನ್ ಸಂಸ್ಥೆಯ ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ., ಆಡಳಿತಾಧಿಕಾರಿ ಶೋಭಾ ಯು.ಪಿ., ಲೆಕ್ಕಾಧಿಕಾರಿ ಸೌಮ್ಯ ಯು.ಪಿ., ಸಂಸ್ಥೆಯ ಆಡಳಿತ ವರ್ಗದವರು, ಸಿಬ್ಬಂದಿವರ್ಗ ಮತ್ತು ಆಶ್ರಮದ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.





