Wed. Nov 26th, 2025

ಉಜಿರೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ “ಸ್ವಚ್ಛ ಉಜಿರೆ -ಸ್ವಸ್ಥ ಉಜಿರೆ” ಸ್ವಚ್ಛತಾ ಅಭಿಯಾನ

ಉಜಿರೆ: ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ರಿ.)ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ,’ಸ್ವಚ್ಛ ಉಜಿರೆ -ಸ್ವಸ್ಥ ಉಜಿರೆ’ಸ್ವಚ್ಛತಾ ಅಭಿಯಾನ ನಡೆಯಿತು.

ಇದನ್ನೂ ಓದಿ: 🔵ಬೆಳ್ತಂಗಡಿ: ರಾಷ್ಟ್ರಪತಿ ದ್ರೌಪದಿಮುರ್ಮು , ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳು


ಅಭಿಯಾನವನ್ನು ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾಕಿರಣ್ ಕಾಮತ್ ಮಾತನಾಡಿ ” ಶ್ರೀ ಕ್ಷೇತ್ರ ಧರ್ಮಸ್ಥಳವು ಸ್ವಚ್ಛತೆಗೆ ಹೆಸರುವಾಸಿ. ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಅಂಗವಾಗಿ ನಡೆಯುತ್ತಿರುವ ಈ ಸ್ವಚ್ಛತೆ ಕಾರ್ಯಕ್ರಮ ಅರ್ಥಪೂರ್ಣ ವಾದುದು”ಎಂದು ಹೇಳಿದರು

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಇದರ ಅಧ್ಯಕ್ಷರಾದ ರಮೇಶ್ ಬಿ ಎನ್ ಮಾತನಾಡಿ ” ಸ್ವಚ್ಛತೆ ಎನ್ನುವುದು ಇನ್ನೊಬ್ಬರು ಹೇಳಿ ಕಲಿಯುವಂತದಲ್ಲ.ಪ್ರತಿಯೊಬ್ಬರೂ ಸ್ವಚ್ಛತೆಯ ಅರಿವು ಮೂಡಿಸಿಕೊಳ್ಳಬೇಕು.ಆಗ ಮಾತ್ರ ಸ್ವಚ್ಛ ಭಾರತದ ಕನಸು ನನಸು ಆಗಲು ಸಾಧ್ಯ” ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಮೋದ್ ಕುಮಾರ್ ಅಧ್ಯಕ್ಷತೆ ಅಧ್ಯಕತೆ ವಹಿಸಿದ್ದರು.
ಸ್ವಚ್ಛ ಉಜಿರೆ ಸ್ವಸ್ಥ ಉಜಿರೆ ಅಭಿಯಾದಲ್ಲಿ ಎನ್ ಎಸ್ ಸ್ವಯಂ ಸೇವಕರು ಉಜಿರೆ ಕಾಲೇಜಿನಿಂದ ಉಜಿರೆ ವೃತ್ತದ ವರೆಗೆ ಸ್ವಚ್ಛತೆ ನಡೆಸಿದರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ ಉಪಸ್ಥಿತರಿದ್ದರು.
ಸ್ವಯಂ ಸೇವಕ ಕಾರ್ತಿಕ್ ಸ್ವಾಗತಿಸಿ ನಿರೂಪಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು