Fri. Nov 28th, 2025

ಉಜಿರೆ: ರಮ್ಯಾ1 ಗ್ರಾಂ ಗೋಲ್ಡ್, ಫ್ಯಾನ್ಸಿ ಮತ್ತು ಫೂಟ್ ವೇರ್ ನೂತನ ಶೋರೂಂ ನ ಉದ್ಘಾಟನೆ

ಉಜಿರೆ: ಉಜಿರೆಯಲ್ಲಿರುವ ರಮ್ಯಾ 1ಗ್ರಾಂ ಗೋಲ್ಡ್, ಫ್ಯಾನ್ಸಿ, ಮತ್ತು ಫೂಟ್ ವೇರ್ ನೂತನ ಶೋರೂಂ ನ. 28ರಂದು ಶುಭಾರಂಭಗೊಂಡಿತು.

ನೂತನ ಶೋರೂಂ ನ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರವರು ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕರಾದ ಕೆ. ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು,

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಉದ್ಯಮಿ ಪ್ರವೀಣ್ ಫೆರ್ನಾಂಡಿಸ್‌ ಹಳ್ಳಿಮನೆ, ಉಜಿರೆ ಗಣೇಶ್ ಆಯಿಲ್ ಮಿಲ್ ಮಾಲಕ ನಾಗರಾಜ್ ಕಾಮತ್, ಇನ್ನಿತರ ಗಣ್ಯರು, ಗ್ರಾಹಕರು, ಕುಟುಂಬ ವರ್ಗದವರು ಹಾಜರಿದ್ದು ಶುಭ ಹಾರೈಸಿದರು.


ಮಾಲಕರಾದ ಬಿಚಿತ್ರಾ ಮತ್ತು ಪ್ರಸಾದ್ ಬಿ.ಎಸ್. ಗಣ್ಯರನ್ನು ಸ್ವಾಗತಿಸಿ, ಗೌರವಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ, ಪ್ರಸಾದ್ ಬಿ. ಎಸ್. ವಂದಿಸಿದರು.

Leave a Reply

Your email address will not be published. Required fields are marked *