Tue. Dec 2nd, 2025

Bantwal: ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ – ತಾಯಿ ಕೊಟ್ಟ ದೂರಿನಲ್ಲೇನಿದೆ??

ಬಂಟ್ವಾಳ: ಬರಿಮಾರು ಗ್ರಾಮದ ದೇಲಬೆಟ್ಟು ನಿವಾಸಿ ರಮಾನಂದ (25) ಎಂಬಾತ ನ.25 ರಂದು ನಾಪತ್ತೆಯಾಗಿದ್ದ, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಇದನ್ನೂ ಓದಿ: 🔵ಬೆಳ್ತಂಗಡಿ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಮುಂಡಾಜೆ ತಂಡದ ಭಜಕ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸ್ವಚ್ಛತೆ ಕಾರ್ಯಕ್ರಮ

ಬಳಿಕ ಈತನ ಮೃತದೇಹ ವಾಮಂಜೂರು ಕೆತ್ತಿಕಲ್ಲು ಎಂಬಲ್ಲಿ ಪತ್ತೆಯಾಗಿದೆ. ರಮಾನಂದ ಅವರ ಮೃತದೇಹ ಕೆತ್ತಿಕಲ್ಲು ಎಂಬಲ್ಲಿ ಗುಡ್ಡದ ಮರದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇತ್ತು, ಮೇಲ್ನೋಟಕ್ಕೆ ಈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹಗ್ಗ ತುಂಡಾಗಿ ಕೆಳಗೆ ಬಿದ್ದಂತೆ ಕಾಣಿಸಿಕೊಂಡಿದ್ದು, ವಾಮಂಜೂರು ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದ ರಮಾನಂದ ಅವರದು ಆತ್ಮಹತ್ಯೆ ಅಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂಬ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಿ ಎಂದು ತಾಯಿ ವಾಮಂಜೂರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *