Thu. Dec 4th, 2025

Bantwal: “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಶ್ರೀ ಟಿ. ಜಿ. ರಾಜಾರಾಮ್ ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ : ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತ, ಪಾಣೆಮಂಗಳೂರು ಇದರ ವತಿಯಿಂದ “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಶ್ರೀ ಟಿ. ಜಿ. ರಾಜಾರಾಮ್ ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತ, ಪಾಣೆಮಂಗಳೂರು ಇದರ ಮುಖ್ಯ ಕಚೇರಿಯಲ್ಲಿ ಜರಗಿತು.

ಇದನ್ನೂ ಓದಿ: 🛑ನಾರಾವಿ: ಶ್ರೀಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಸುಲ್ಕೇರಿ ಹಿಂದೂರುದ್ರ ಭೂಮಿಗೆ ಸಿಲಿಕಾನ್ ಚೇಂಬರ್ ಮಂಜೂರಾತಿ ಪತ್ರ ಹಸ್ತಾಂತರ

ಗೌರವ ಅಭಿನಂದನೆ ಸ್ವೀಕರಿಸಿದ ರಾಜಾರಾಮ್ ಭಟ್ ತಮ್ಮ ಸಹಕಾರಿ ಕ್ಷೇತ್ರದ ಅನುಭವವನ್ನು ಹಂಚಿಕೊಂಡು ಗೌರವ ಅಭಿನಂದನೆಗಳನ್ನು ಇಷ್ಟಪಡದಿದ್ದರೂ ಸಹಕಾರಿ ಕ್ಷೇತ್ರದಲ್ಲಿ ದುಡಿಯುವವರಿಗೆ ಪ್ರೇರಣೆಗೋಸ್ಕರ ಸನ್ಮಾನವನ್ನು ಸ್ವೀಕರಿಸಿದ್ದೇನೆ ಎಂದರು.

ಶ್ರೀಯುತರನ್ನು ಅಭಿನಂದಿಸಿ ಮಾತನಾಡಿದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರಾಜಾರಾಮ್ ಭಟ್ ರವರು ಸಹಕಾರ ಕ್ಷೇತ್ರದ ಭೀಷ್ಮ, ಅರ್ಹ ವಾಗಿಯೇ ಈ ಪ್ರಶಸ್ತಿ ಲಭಿಸಿದೆ, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ರಾಜಾರಾಮ್ಭಟ್ ರವರ ಕೊಡುಗೆ ಅಪಾರವಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷರಾದ ಸುಬ್ರಾಯ ಕಾರಂತ, ಮಾಜಿ ನಿರ್ದೇಶಕರಾದ ಶ್ರೀನಿವಾಸ್ ಭಟ್, ವೆಂಕಟೇಶ್ವರ ಭಟ್ ಮುಳ್ಳುಂಜ, ರಾಜಾರಾಮ್ ಭಟ್ ಬಗ್ಗೆ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ ರವರು ಅಧ್ಯಕ್ಷತೆಯನ್ನು ವಹಿಸಿ ರಾಜಾರಾಮ್ ಭಟ್ ರವರು ಸಂಘ ಸಂಸ್ಥೆಗಳಲ್ಲಿ ನೀಡಿದ ಕೊಡುಗೆಗಳ ಬಗ್ಗೆ ವರ್ಣಿಸಿದರು.

ಸಂಘದ ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ, ನಿರ್ದೇಶಕರಾದ ಜ್ಞಾನೇಶ್ವರ ಪ್ರಭು, ವಿಜಯ ರೈ ಬೆಳ್ಳಿಪ್ಪಾಡಿ, ನಾಗಪ್ಪ ನಾಯ್ಕ, ಲಿಂಗಪ್ಪ ಎಸ್, ಅರವಿಂದ ಭಟ್, ನಾರಾಯಣ ಪೂಜಾರಿ, ಗಣೇಶ್ ಕುಮಾರ್, ಶ್ರೀಮತಿ ಮೋಹಿನಿ ಜೆ ಶೆಟ್ಟಿ, ಶ್ರೀಮತಿ ಮಮತಾ, ಶ್ರೀಮತಿ ರತ್ನ ಉಪಸ್ಥಿತರಿದ್ದರು.

ಸಂಘದ ಮಾಜಿ ನಿರ್ದೇಶಕರಾದ ಪ್ರೇಮನಾಥ್ ಶೆಟ್ಟಿ, ಸುರೇಶ, ಸಂಘದ ಸಿಬ್ಬಂದಿ ವರ್ಗದವರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಲ್ಲಡ್ಕ ಹಾಗೂ ಬಿಸಿ ರೋಡು ಶಾಖೆಯ ಶಾಖಾ ವ್ಯವಸ್ಥಾಪಕರು, ಬಂಟ್ವಾಳ ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಯಶವಂತ ಡಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ  ವಂದಿಸಿದರು.

Leave a Reply

Your email address will not be published. Required fields are marked *