ಕಡಬ: ಪ್ರಕರಣದ ಪಿರ್ಯಾದಿದಾರರಾದ ಕಡಬ, ಕೊಯಿಲ ನಿವಾಸಿ ಬಾಬು ಗೌಡ (53) ಎಂಬವರ ದೂರಿನಂತೆ, ದಿನಾಂಕ: 03.12.2025 ರಂದು ತಡರಾತ್ರಿ ವೇಳೆ, ಪಿರ್ಯಾದುದಾರರ ಮನೆಯ ಸಮೀಪವಿರುವ ಅವರ ಸಹೋದರ ಹರೀಶ ಎಂಬವರ ಮನೆಯಲ್ಲಿ ಜೋರಾಗಿ ಶಬ್ದ ಕೇಳಿದ್ದು, ಪಿರ್ಯಾದಿದಾರರು ಹೋಗಿ ನೋಡಿದಾಗ,

ಇದನ್ನೂ ಓದಿ: ⭕ಕಡಬ: ಹಠಾತ್ ಆರೋಗ್ಯದಲ್ಲಿ ಏರುಪೇರು – ವಿದ್ಯಾರ್ಥಿನಿ ನಿಧನ
ಪಿರ್ಯಾದಿದಾರರ ತಮ್ಮನ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಮನೆಯ ಸದಸ್ಯರುಗಳು ಹಿಡಿದುಕೊಂಡಿದ್ದು, ಸದ್ರಿ ಅಪರಿಚಿತನು ತಪ್ಪಿಸಿಕೊಳ್ಳುವ ಉದ್ದೇಶದಿಂದ, ಮನೆಯ ಸದಸ್ಯರ ಪೈಕಿ ಚೇತನ್ ಎಂಬಾತನಿಗೆ ಮೇಲೆ ಕೈಯಿಂದ ಹಲ್ಲೆ ಮಾಡಿರುತ್ತಾನೆ. ಪಿರ್ಯಾದಿದಾರರು ಆತನನ್ನು ಉಳಿದವರ ಸಹಾಯದಿಂದ ಹಿಡಿದು ವಿಚಾರಿಸಲಾಗಿ,

ಸದ್ರಿ ಅಪರಿಚಿತ ವ್ಯಕ್ತಿಯು ಕಡಬ ಪೊಲೀಸ್ ಠಾಣೆಯ ಹೆಚ್.ಸಿ ರಾಜು ನಾಯ್ಕ ಎಂಬುದಾಗಿ ತಿಳಿದು ಬಂದಿರುತ್ತದೆ. ಸದ್ರಿ ರಾಜು ನಾಯ್ಕರವರು ತಡರಾತ್ರಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಸದಸ್ಯರಿಗೆ ಕೈಯಿಂದ ಹಲ್ಲೆ ನಡೆಸಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 86/2025. ಕಲಂ: ಕಲಂ-329(3), 115(2), 331(6) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


ಸದ್ರಿ ಹೆಚ್.ಸಿ ರಾಜು ನಾಯ್ಕ ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಹಾಗೂ ತಕ್ಷಣ ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿರುತ್ತದೆ.


