Tue. Dec 23rd, 2025

ಉಜಿರೆ: ಬದನಾಜೆ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂಭ್ರಮ – ದಾನಿ ಕೆ. ಮೋಹನ್ ಕುಮಾರ್‌ ಅವರಿಗೆ ಮಕ್ಕಳಿಂದ ಅಪೂರ್ವ ಗೌರವ

ಉಜಿರೆ: ಬದನಾಜೆಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಮೃತ ಮಹೋತ್ಸವದ ಸಡಗರ ಮನೆಮಾಡಿತ್ತು. ಈ ಸಂಭ್ರಮದ ಜೊತೆಗೆ ಶಾಲೆಯ ನೂತನ ‘ಸುಜ್ಞಾನ’ ಸಭಾಂಗಣದ ಲೋಕಾರ್ಪಣೆ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆರವೇರಿತು.

ಇದನ್ನೂ ಓದಿ: ವಿಟ್ಲ: ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚದಲ್ಲಿ ಭಜನೋತ್ಸವ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಬದನಾಜೆ ಶಾಲೆಯ ಈ ಅಭಿವೃದ್ಧಿ ಪಥದಲ್ಲಿ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ಯ ಮಾಲೀಕರು ಹಾಗೂ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕರಾದ ಕೆ. ಮೋಹನ್ ಕುಮಾರ್ ಅವರ ಕೊಡುಗೆ ಅನನ್ಯವಾದದ್ದು. ಶಾಲೆಯ ಮೂಲಸೌಕರ್ಯ ಮತ್ತು ಸುಜ್ಞಾನ ಸಭಾಂಗಣದ ನಿರ್ಮಾಣದಲ್ಲಿ ಅವರು ತೋರಿದ ಔದಾರ್ಯವು ಇಂದು ಶಾಲೆಯ ಮುಖಬೆಲೆಯನ್ನು ಬದಲಿಸಿದೆ.

ಮಕ್ಕಳ ಮನಸ್ಸನ್ನು ಗೆದ್ದ ಮೋಹನ್ ಕುಮಾರ್ ಅವರಿಗೆ ವಿದ್ಯಾರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿದರು.

ಒಬ್ಬ ದಾನಿಗೆ ವಿದ್ಯಾರ್ಥಿಗಳಿಂದ ಸಿಕ್ಕ “ಕಲಾತ್ಮಕ ಗೌರವ ಇಡೀ ಕಾರ್ಯಕ್ರಮದ ಹೈಲೈಟ್ ಆಗಿತ್ತು.

ಊರಿನ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ ಕೆ. ಮೋಹನ್ ಕುಮಾರ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಅಮೃತ ಮಹೋತ್ಸವವು ಬದನಾಜೆ ಶಾಲೆಯ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವಾಗಿ ದಾಖಲಾಗಿದೆ. ಶಿಕ್ಷಣ ಮತ್ತು ಸಮಾಜ ಸೇವೆಯ ಅಪೂರ್ವ ಸಂಗಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *