Tue. Dec 23rd, 2025

ಬೆಳ್ತಂಗಡಿ : ಕನ್ಯಾಡಿ ಲಾಡ್ಜ್ ಗೆ ಅಕ್ರಮ ಜೂಜಾಟದ ಮೇಲೆ ಪೋಲಿಸ್‌ ದಾಳಿ – 11 ಮಂದಿಯ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಲಾಡ್ಜ್ ಮೇಲೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ 11 ಮಂದಿಯನ್ನು ಬಂಧಿಸಿ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ಬಳಿಯ ಖಾಸಗಿ ಲಾಡ್ಜ್ ನಲ್ಲಿ ಅಕ್ರಮವಾಗಿ ಜನ ಸೇರಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.22 ರಂದು ರಾತ್ರಿ 7:40 ಕ್ಕೆ ಲಾಡ್ಜ್ ಮೇಲೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿ ವೇಳೆ ಜೂಜಾಟ ಆಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದು. ಬಂಧಿತರ ಬಳಿ 3 ಲಕ್ಷದ 7 ಸಾವಿರ ರೂಪಾಯಿ ಹಣ, ಜೂಜಾಟಕ್ಕೆ ಬಳಸಿದ ಚೇಯರ್ , ಟೇಬಲ್, ಜೂಜಾಟದ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟ ಆಡುತ್ತಿದ್ದ ಒಟ್ಟು 13 ಮಂದಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟ‌ರ್ ಸಮರ್ಥ ಆರ್ ಗಾಣಿಗೇರ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *