ಬೆಂಗಳೂರು : ನನ್ನ ಗಂಡ ಮನೆಯಲ್ಲಿ ಅತ್ತೆ-ಮಾವನ ಮುಂದೆ ಹಾಗೂ ಪ್ಯಾಸೇಜ್ನಲ್ಲೂ ಬೆತ್ತಲೆಯಾಗೇ ಓಡಾಡ್ತಾನೆ ಎಂದು ಹೆಂಡ್ತಿ ಆರೋಪಿಸಿದ್ದಾಳೆ. ಸಾಫ್ಟ್ವೇರ್ ಕಂಪನಿಯಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡ್ತಿದ್ದ ಮಂಜುನಾಥ್ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನ ಪ್ರೀತಿಸಿ ಮದುವೆಯಾಗಿದ್ದರಂತೆ.

ಇದನ್ನೂ ಓದಿ: 🔷ಉಜಿರೆ: ಶಾಸಕ ಹರೀಶ್ ಪೂಂಜರಿಂದ ಪತ್ರಿಕಾಗೋಷ್ಠಿ
ಸೆಪ್ಟೆಂಬರ್ ತಿಂಗಳಲ್ಲಿ ಮಂಜುನಾಥ್ ಹಾಗೂ ಸಂತ್ರಸ್ಥೆ ಮದುವೆಯಾಗಿದೆ. ಮದುವೆಯಾದ ನಾಲ್ಕೇ ತಿಂಗಳಿಗೆ ಗಂಡನ ಹುಚ್ಚಾಟಕ್ಕೆ ಮಹಿಳೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ವಿಚಿತ್ರ ಲೈಂಗಿಕ ಕ್ರಿಯೆಗೆ ಒತ್ತಾಯ
ಮಂಜುನಾಥನೇ ಮಹಿಳೆಯನ್ನು ಪ್ರೀತಿಸಿ ಒಪ್ಪಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಡ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದು ಹೆಂಡತಿ ಆರೋಪ ಮಾಡಿದ್ದಾರೆ. ವಿಚಿತ್ರ ಲೈಂಗಿಕ ಕ್ರಿಯೆಗೆ ಗಂಡ ಒತ್ತಾಯ ಮಾಡ್ತಾನೆ. ಅಲ್ಲೇ ಮನೆಯ ಒಳಗೆ ಹಾಗೂ ಪ್ಯಾಸೆಜ್ ನಲ್ಲೂ ಬೆತ್ತಲೆಯಾಗಿಯೇ ಓಡ್ತಾನೆ ಎಂಬ ಆರೋಪಗಳನ್ನ ಸಂತ್ರಸ್ಥೆ ಮಾಡಿದ್ದಾರೆ.
ಗಂಡನ ವಿಚಿತ್ರ ವರ್ತನೆ ಹಾಗೂ ಕಿರುಕುಳಕ್ಕೆ ಬೇಸತ್ತು ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರಂಭದಲ್ಲೇ ಚೆನ್ನಾಗಿಯೇ ಇದ್ದ ಜೋಡಿ:
ಮದುವೆಯಾದ ಕೆಲ ತಿಂಗಳು ಇಬ್ಬರೂ ಚೆನ್ನಾಗಿಯೇ ಇದ್ರು ಎನ್ನಲಾಗ್ತಿದೆ. ಆದ್ರೆ ಇತ್ತೀಚೆಗೆ ಆರೋಪಿ ಮಂಜುನಾಥ್ ವಿಚಿತ್ರ ವರ್ತನೆ ತೋರುತ್ತಿದ್ದ ಎಂದು ಹೆಂಡತಿ ಆರೋಪ ಮಾಡಿದ್ದಾರೆ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡ್ತಿದ್ದ ಎನ್ನುವ ಆರೋಪ ಕೂಡ ಇದೆ.

ಅತ್ತೆ-ಮಾವನ ಮುಂದೆಯೂ ಬೆತ್ತಲೆ ಓಡಾಟ:
ಮನೆಯಲ್ಲಿ ನಾಲ್ಕು ಗೋಡೆಯ ಮಧ್ಯೆಯಲ್ಲ, ಅತ್ತೆ ಮಾವನ ಮುಂದೆ ಕೂಡ ಮಂಜುನಾಥ್ ಬೆತ್ತಲೆಯಾಗಿ ಓಡಾಡ್ತಾನೆ. ಪ್ಯಾಸೆಜ್ ನಲ್ಲಿಯೂ ಹಾಗೇ ಹೋಗ್ತಾನೆ. ಇದ್ರಿಂದ ಅಕ್ಕ-ಪಕ್ಕದ ಮನೆಯವರಿಗೂ ಮುಜುಗರವಾಗಿದೆ ಎಂದು ಹೆಂಡ್ತಿ ಆರೋಪ ಮಾಡಿದ್ದಾರೆ.

ಈತನ ವಿಚಿತ್ರ ವರ್ತನೆ, ಕಿರುಕುಳಕ್ಕೆ ಬೇಸತ್ತು ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, ಕೇಂದ್ರ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


