Wed. Dec 31st, 2025

ಬೆಳ್ತಂಗಡಿ: ಬೆಳ್ತಂಗಡಿ ನ್ಯಾಯಾಲಯಕ್ಕೆ ರಾಜ್ಯದ ಪ್ರಸಿದ್ಧ ನ್ಯಾಯವಾದಿ ಶ್ರೀ ಸಿ ವಿ. ನಾಗೇಶ್ ಆಗಮನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025ರ ಶ್ರೀ ಕ್ಷೇತ್ರದ ಪರವಾಗಿ ವಕಾಲತ್ತು ವಹಿಸಲು ರಾಜ್ಯದ ಅತ್ಯಂತ ಪ್ರಭಾವಿ ಮತ್ತು ಹಿರಿಯ ನ್ಯಾಯವಾದಿಗಳಾದ ಶ್ರೀ ಸಿ.ವಿ. ನಾಗೇಶ್ ಅವರು ಇಂದು ಅಖಾಡಕ್ಕಿಳಿಯುತ್ತಿದ್ದಾರೆ.

ಇಂದು ಮಧ್ಯಾಹ್ನ 2.30ಕ್ಕೆ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ನ್ಯಾಯಾಲಯದ ಪ್ರಕ್ರಿಯೆಯ ನಂತರ ಸಿ.ವಿ. ನಾಗೇಶ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಪ್ರಕರಣದ ಕಾನೂನು ಆಯಾಮಗಳ ಬಗ್ಗೆ ಅವರು ನೀಡಲಿರುವ ಹೇಳಿಕೆ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *