ನಡ: 100ರ ವರ್ಷಾಚರಣೆ ಸಂಭ್ರಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇದರ ಶತಮಾನೋತ್ಸವ ಸಮಿತಿ ರಚನೆಗೊಂಡಿದೆ.
ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಮುನಿರಾಜ ಅಜ್ರಿ, ಕಾರ್ಯಾಧ್ಯಕ್ಷರಾಗಿ ಶಶಿಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ , ಕೋಶಾಧಿಕಾರಿಯಾಗಿ ಸಯ್ಯದ್ ಹಬೀಬ್ ಸಾಹೇಬ್ ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರುಗಳಾಗಿ ಶಾಸಕ ಹರೀಶ್ ಪೂಂಜ, ಮೆಸ್ಕಾಂ ನಿಗಮ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್, ಶಾಲಾ ಸಂಸ್ಥಾಪಕ ಮನೆತನದ ಧನಂಜಯ ಅಜ್ರಿ ನಡಗುತ್ತು, ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇವರು ಮಾರ್ಗದರ್ಶನ ನೀಡಲಿದ್ದಾರೆ. ಪ್ರಧಾನ ಸಂಚಾಲಕರಾಗಿ ಡಾ. ಸತೀಶ್ಚಂದ್ರ ಸುರ್ಯಗುತ್ತು,

ಉಪಾಧ್ಯಕ್ಷರುಗಳಾಗಿ ಅಜಿತ್ ಕುಮಾರ್ ಅರಿಗ, ಜಯ ಶೆಟ್ಟಿ, ಶ್ಯಾಮಸುಂದರ್, ಅಪ್ಪು, ಸ್ಟೇನಿ ಪಿಂಟೋ, ಶ್ರೀಮತಿ ಗ್ರೇಸಿ ವೇಗಸ್ ಹರೀಶ್ಚಂದ್ರ ಗೌಡ, ವಸಂತ್ ಗೌಡ, ಸಲಹೆಗಾರರಾಗಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳಾ, ಮಾಜಿ ಜಿ.ಪಂ. ಸದಸ್ಯ ಬಿ. ರಾಜಶೇಖರ ಅಜ್ರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್, ಎಸ್. ಡಿ. ಎಂ. ಸಿ. ಅಧ್ಯಕ್ಷ ಜನಾರ್ಧನ್ ನಾಯ್ಕ್, ಡಾ. ಪ್ರದೀಪ್ ನಾವೂರು, ಲಯನ್ ಮುರಳಿ ಬಲಿಪ, ಕಾರ್ಯದರ್ಶಿಗಳಾಗಿ ವಸಂತ್ ಗೌಡ , ಜಾಕಿರ್ ಹುಸೇನ್, ಶ್ರೀಮತಿ ಸಂಧ್ಯಾ ಜೈನ್, ಸಂಘಟನಾ ಕಾರ್ಯದರ್ಶಿಗಳಾಗಿ ವಿಜಯ ಗೌಡ, ಜಯಂತ ಗೌಡ ಕೊಯಗುಡ್ಡೆ, ಜತೆ ಕೋಶಾಧಿಕಾರಿಯಾಗಿ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ, ಜತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಸುಜಾತಾ ಎಸ್., ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಸುಮಾರು 60 ವಿದ್ಯಾಭಿಮಾನಿಗಳನ್ನು ಆಯ್ಕೆ ಮಾಡಲಾಯಿತು.


ಶತಮಾನೋತ್ಸವ ಸಮಿತಿ ವತಿಯಿಂದ ಶಾಲೆಗೆ ಸುಸಜ್ಜಿತ ರಂಗ ಮಂದಿರ, ಇಂಟರ್ ಲಾಕ್, ಆವರಣ ಗೋಡೆ, ದ್ವಾರ ಇತ್ಯಾದಿ ಶಾಶ್ವತ ಕಾಮಗಾರಿ ಗಳನ್ನು ಮಾಡುವುದೆಂದು ನಿರ್ಧರಿಸಲಾಗಿದೆ.


