Fri. Jan 2nd, 2026

Belagavi: ಮೂರು ಮಕ್ಕಳ ತಾಯಿ ಜತೆ ಲವ್ವಿಡವ್ವಿ – ರಾತ್ರಿ ಹೊತ್ತು ಪ್ರಿಯತಮೆಯ ಮನೆಗೆ ಹೋಗಿದ್ದವನಿಗೆ ಕಾದಿತ್ತು ಶಾಕ್..!

ಬೆಳಗಾವಿ: ಮೂರು ಮಕ್ಕಳ ತಾಯಿ ಜತೆ ನಾಲ್ಕು ವರ್ಷಗಳಿಂದ ಯಕ್ಸಂಬಾ ಪಟ್ಟಣದ ಅಕ್ಷಯ ಕಲ್ಲಟಗಿ ಎಂಬ ಯುವಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ: “ಶಾಂತಿವನ ಟ್ರಸ್ಟ್ ” ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ 31 ನೇ ವರ್ಷದ ರಾಜ್ಯಮಟ್ಟದ “ಜ್ಞಾನ ರಥ- ಜ್ಞಾನ ಪಥ” ನೈತಿಕ ಮೌಲ್ಯಾಧಾರಿತ ಪುಸ್ತಕ ಸ್ಪರ್ಧೆಯ ಪುರಸ್ಕಾರ ಸಮಾರಂಭ

ಯುವಕನ ಮೇಲೆ ಮಹಿಳೆಯ ಪತಿ ಹಾಗೂ ಆತನ ಸಹೋರ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಕರೋಶಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಬಾ ಎಂದು ಕರೆದಿದ್ದ ಮಹಿಳೆ: ನಂಬಿ ಹೋದವನಿಗೆ ಬಿತ್ತು ಗೂಸಾ
ರಾತ್ರಿ ಭೇಟಿಯಾಗಲು ಬಾ ಎಂದು ಅಕ್ಷಯ್​ಗೆ ಮಹಿಳೆಯೇ ಕರೆ ಮಾಡಿ ಹೇಳಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಅದರಂತೆ ಅಕ್ಷಯ್ ಆಕೆಯ ಭೇಟಿಯಾಗಲು ತೆರಳಿದ್ದಾರೆ. ಈ ವೇಳೆ, ಅಕ್ಷಯನನ್ನು ದಾರಿ ಮಧ್ಯೆ ತಡೆದ ಮಹಿಳೆಯ ಗಂಡ ಹಾಗೂ ಆಕೆಯ ಸಹೋದರ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಿಗ್ಗಾಮುಗ್ಗಾ ಹಲ್ಲೆ ನಡೆದಿದ್ದರಿಂದ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದಾನೆ.

Leave a Reply

Your email address will not be published. Required fields are marked *