ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಮಡಂತ್ಯಾರು ವಲಯದ ಪಾರಂಕಿ ಬಿ, ಪಾರಂಕಿ ಸಿ ಒಕ್ಕೂಟದವರಿಂದ ಶ್ರೀ ಮಾರಿಕಾಂಬಾದೇವಿ ದಶಮಾನೋತ್ತರ ಅಷ್ಟಮ ಕಾರ್ಯಕ್ರಮದ ಪ್ರಯುಕ್ತ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ಭಕ್ತಿ ಶ್ರದ್ಧೆಯಿಂದ ಸ್ವಚ್ಛತೆ ಮಾಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಚೇರಿ ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕರು ಮಹಾಬಲ ಕುಲಾಲ್ ಹಾಗೂ ಎಸ್.ಹೆಚ್.ಜಿ ವಿಭಾಗದ ನಿರ್ದೇಶಕರು ಪ್ರದೀಪ್ ಹಾಗೂ ದೇವಸ್ಥಾನ ಕೋಶಾಧಿಕಾರಿ ಡಾ.ಕೆ.ಎಸ್. ಬಲ್ಲಾಳ್, ಬಾಲಚಂದ್ರ ಹೆಗ್ಡೆ ಅರವಿಂದ್ ಪಡಿವಾಳ್ ಆಡಳಿತ ಮೊಕ್ತೇಸರರು, ಕಿರಣ್ ಪಡಿವಾಳ್ ವಲಯದ ಮೇಲ್ವಿಚಾರಕರು ಕೇಶವ ಕೆ ಸೇವಾಪ್ರತಿನಿಧಿಗಳಾದ ಹರಿಣಾಕ್ಷಿ, ಲೀಲಾವತಿ, ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.





