Wed. Jan 14th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಪೆರ್ನೆ ವಲಯದ ಪೆರಾಜೆ ಒಕ್ಕೂಟದ ಒಕ್ಕೂಟೋತ್ಸವ ಕಾರ್ಯಕ್ರಮ

ವಿಟ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರಾಜೆ ಒಕ್ಕೂಟೋತ್ಸವ ಕಾರ್ಯಕ್ರಮ “ಗ್ರಾಮಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಂತಹ ಸಂಘಟನೆಗಳು ಅತೀ ಅಗತ್ಯವಾಗಿದೆ. ಹೊಸ ಯೋಜನೆ, ಹೊಸ ಆಲೋಚನೆಗಳೊಂದಿಗೆ ಯುವ ಪೀಳಿಗೆಯನ್ನು ಪ್ರೊಡಕ್ಷನ್ ಈ ಸಂಘದಲ್ಲಿ ಕಲ್ಯಾಣ ಸಮಾಜಕ್ಕೆ ಇದು ದಾರಿದೀಪವಾಗಲಿ.

ನಮ್ಮ ಬದುಕು ಒಂದು ಚೌಕಟ್ಟಿಗೆ ಸೀಮಿತವಾಗಿರದೆ ಅವೆಷ್ಟು ಯುಗಗಳು ಕಳೆದರೂ ರಾರಾಜಿಸುತ್ತಿರಬೇಕು. ನಮಗೆ ನಮ್ಮ ಅಜ್ಜನ ಅಜ್ಜನ ಹೆಸರು ಗೊತ್ತಿಲ್ಲ ಆದರೆ ಅವೆಷ್ಟು ಯುಗದ ಹಿಂದೆ ಅವತರಿಸಿದ ಕೃಷ್ಣ, ಶ್ರೀರಾಮ, ಬುದ್ಧರ ಹೆಸರು ಎಲ್ಲರಿಗೂ ಗೊತ್ತಿರುತ್ತೆ. ನಮ್ಮ ಹೆಸರು ಕೂಡ ಹೀಗೆ ಯುಗ ಯುಗದಲ್ಲಿ ಪಸರಿಸುವಂತಿರಬೇಕು”ಎಂದು ಕಿಯೋನಿಕ್ಸ್ ಬೆಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ನುಡಿದರು‌.

ಇವರು ಪೆರಾಜೆ ಶಾಲೆಯ ಸಭಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಪೆರಾಜೆ ಒಕ್ಕೂಟದ 20 ನೇ ವರ್ಷಾಚರಣೆ ಪ್ರಯುಕ್ತ ನಡೆಸಿದ ಒಕ್ಕೂಟೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಕಿ ಒಕ್ಕೂಟದ ಅಧ್ಯಕ್ಷರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಪ್ರಾಯ ಪೈ ಬುಡೋಳಿ ನೆರವೇರಿಸಿದರು. ಬಾಬು ನಾಯ್ಕ್ ದ.ಕ 2 ಜಿಲ್ಲಾ ನಿರ್ದೇಶಕರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಬೆಳೆದು ಬಂದ ಹಾದಿ ಹಾಗೂ ಒಕ್ಕೂಟದ ಬಲವರ್ಧನೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಹಿರಿಯ ಫಲಾನುಭವಿಗಳು, ನಿಕಟಪೂರ್ವ ಅಧ್ಯಕ್ಷರು, ನವಜೀವನ ಸಮಿತಿ ಸದಸ್ಯರು, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಹಿಂದೆ ಸೇವೆ ಸಲ್ಲಿಸಿದ ಸೇವಾಪ್ರತಿನಿಧಿಗಳು, ಸಿ ಎಸ್ ಸಿ ಸೇವಾದಾರರು, ಸುವಿಧಾ ಸಹಾಯಕರು, ಮಾದರಿ ಸ್ವ ಸಹಾಯ ಸಂಘ ಮತ್ತು ಪ್ರಗತಿಬಂಧು ಸಂಘಗಳನ್ನು ಗುರುತಿಸಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಶಲ ಎಂ ಅಧ್ಯಕ್ಷರು ಗ್ರಾಮ ಪಂಚಾಯತ್ ಪೆರಾಜೆ, ಶ್ರೀನಾಥ ಆಳ್ವ ಪೆರಾಜೆ ಗುತ್ತು ಗೌರವಾಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ, ಚಂದ್ರಹಾಸ ಶೆಟ್ಟಿ ಬುಡೋಳಿ ಗುತ್ತು ಅಧ್ಯಕ್ಷರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಪುಷ್ಪರಾಜ ಚೌಟ ಅಧ್ಯಕ್ಷರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಲಕ್ಷ್ಮೀಶ ಪೆರಾಜೆ ಅಧ್ಯಾಪಕರು, ಸಚ್ಚಿದಾನಂದ ರೈ ಪಾಳ್ಯ ಅಧ್ಯಕ್ಷರು ಶ್ರೀ ಗುಡ್ಡ ಚಾಮುಂಡೇಶ್ವರಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸಾದಿಕುಕ್ಕು, ಪ್ರಶಾಂತ್ ಎಂ ಮಂಜೊಟ್ಟಿ ಅಧ್ಯಕ್ಷರು ಯುವಕ ಮಂಡಲ (ರಿ), ವಿನಿತ್ ಶೆಟ್ಟಿ ಅಧ್ಯಕ್ಷರು ಯುವ ವೇದಿಕೆ, ನವೀನ್ ಕುಮಾರ್ ಪದಬರಿ ಸದಸ್ಯರು ಜನಜಾಗೃತಿ ವೇದಿಕೆ ಪೆರ್ನೆ ವಲಯ, ರಾಬರ್ಟ್ ಫೆರ್ನಾಂಡಿಸ್ ಒಕ್ಕೂಟದ ವಲಯಾಧ್ಯಕ್ಷರು ಪೆರ್ನೆ ವಲಯ, ಸುರೇಶ್ ನೂಜೆ ಶೌರ್ಯ ಘಟಕದ ತಾಲೂಕು ಕ್ಯಾಪ್ಟನ್, ಜೀನತ್ ಅಧ್ಯಕ್ಷರು ಎಸ್ ಡಿ ಎಂ ಸಿ ಸ.ಹಿ.ಪ್ರಾ ಶಾಲೆ ಪೆರಾಜೆ, ಮೀನಾಕ್ಷಿ ಅಧ್ಯಕ್ಷರು ವರಮಹಾಲಕ್ಷ್ಮೀ ಸೇವಾ ಸಮಿತಿ, ರಾಘವ ಗೌಡ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘ ಬುಡೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ವಲಯ ಮೇಲ್ವಿಚಾರಕಿ ಶಾರದಾ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಣ್ಣ ಗೌಡ ಒಕ್ಕೂಟದ ಸ್ಥಾಪಕಾಧ್ಯಕ್ಷರು ತಮ್ಮ 20 ವರ್ಷಗಳ ಯೋಜನೆಯ ಸೇವಾನುಭವದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸೇವಾಪ್ರತಿನಿಧಿ ರಮ್ಲತ್ ಒಕ್ಕೂಟದ ಸಾಧನಾ ವರದಿ ಮಂಡನೆ ಮಾಡಿದರು. ಶಿಕ್ಷಕ ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಹರೀಶ್ ಸ್ವಾಗತಿಸಿ, ಕಾವಲು ಸಮಿತಿ ಅಧ್ಯಕ್ಷ ಉಮೇಶ್ ಎಸ್ ಪಿ ವಂದನಾರ್ಪಣೆ ಮಾಡಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರು ಮತ್ತು ಹಾಲಿ ಪದಾಧಿಕಾರಿಗಳಾದ ಮೋಹನ, ಮನೋಹರ, ಜಯಲಕ್ಷ್ಮೀ, ಬಬಿತಾ ಸಹಕರಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕಾರ್ಯಕ್ಷೇತ್ರದ ಸ್ವ ಸಹಾಯ ಸಂಘಗಳ ಪಕ್ಷಿನೋಟದ ಪೆರಾಜೆ ಒಕ್ಕೂಟ ಕಲ್ಪವೃಕ್ಷ, ಸಾಮಾನ್ಯ ಸೇವಾ ಕೇಂದ್ರದ ಮಾಹಿತಿ ನೀಡುವ ಸೆಲ್ಫೀ ಝೋನ್, ನಿರಂತರ ಪತ್ರಿಕೆಯ ಮಾಹಿತಿ ನೀಡುವ ಜ್ಞಾನದರ್ಪಣ ಪ್ರಚಾರ ಫಲಕವು ಎಲ್ಲರ ಕಣ್ಮನ ಸೆಳೆದು ಗಣ್ಯರ ಪ್ರಶಂಸೆಗೆ ಪಾತ್ರವಾಯಿತು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಭಜಕರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟು ನೆರೆದಿದ್ದವರನ್ನು ಭಕ್ತಿಯ ಲೋಕಕ್ಕೆ ಕೊಂಡೊಯ್ದರು. ಕಾರ್ಯಕ್ರಮದ ಕುರಿತಾಗಿ ಸ್ಥಳದಲ್ಲೇ ರಸಪ್ರಶ್ನೆಗಳನ್ನು ಕೇಳಿ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿ ಶ್ರೋತೃಗಳ ಉತ್ಸಾಹವನ್ನು ಹೆಚ್ಚಿಸಲಾಯಿತು. ಒಕ್ಕೂಟದ ಸದಸ್ಯರಿಂದ ವಿವಿಧ ಭಕ್ತಿ ಪ್ರಧಾನ ಮತ್ತು ಜನಪದ ನೃತ್ಯ, ಸರ್ವ ಧರ್ಮ ಸಮನ್ವಯ ಭಾವೈಕ್ಯತೆ ಸಾರುವ ಪ್ರಹಸನ, ಹಿರಿಯ ಸದಸ್ಯರಿಂದ ಮೂಕಾಭಿನಯ, ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿಧ್ಯಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು. ಕಾರ್ಯಕ್ರಮದಲ್ಲಿ ವಲಯದ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಗಣ್ಯರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು