ಬೆಳ್ತಂಗಡಿ : ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಮನೆಯಿಂದ ಜ. 14 ರಂದು 5 ಗಂಟೆಗೆ ಹೊರಟು ಹೋದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ

ಸುಬ್ರಹ್ಮಣ್ಯ ನಾಯಕ್ ಪುತ್ರ ಬಾಲಕ ಸುಮಂತ್(15) ಎಂಬಾತ ದೇವಸ್ಥಾನಕ್ಕೂ ತಲುಪದೆ ಮನೆಗೂ ವಾಪಾಸು ಹೋಗದೆ ನಾಪತ್ತೆಯಾಗಿ ಆತನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜ.15 ರಂದು

ಕೆರೆಯ ನೀರನ್ನು ಪಂಪ್ ಮೂಲಕ ಖಾಲಿ ಮಾಡಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ. ನೇತೃತ್ವದಲ್ಲಿ ತನಿಖೆ ನಡೆಸಿದ ವೇಳೆ ಬಾಲಕ ಸುಮಂತ್ ಹಿಡಿದುಕೊಂಡು ಹೋದ ನೀಲಿ ಬಣ್ಣದ ಟಾರ್ಚ್ ಲೈಟ್ ಪತ್ತೆಯಾಗಿದೆ. ಇದರೊಂದಿಗೆ ಕೆರೆಯಲ್ಲಿ ಹಳೆಯ ತುಕ್ಕು ಹಿಡಿದ ಕತ್ತಿಯೊಂದು ಪತ್ತೆಯಾಗಿದೆ. ಈ ಬಗ್ಗೆ ಸೋಕೋ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಪೋಲಿಸರು ಮತ್ತಷ್ಟು ತನಿಖೆಯನ್ನು ಬಿರುಸುಗೊಳಿಸಿದ್ದಾರೆ.




