Wed. Nov 20th, 2024

Garlic Benefit: ಒಂದಾ, ಎರಡಾ, ಹತ್ತಾರು ಲಾಭ.. ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಸಮಸ್ಯೆ ಮಾಯವಾಗುತ್ತೆ ಗೊತ್ತಾ..?

Garlic Benefit: ಅನೇಕರು ಬೆಳ್ಳುಳ್ಳಿ ಸೇವಿಸುತ್ತಾರೆ. ಇನ್ನು ಕೆಲವರು ಬೆಳ್ಳುಳ್ಳಿ ಎಂದರೆ ಮಾರುದ್ದ ಓಡಿ ಹೋಗ್ತಾರೆ. ಆದರೆ ಇದರಲ್ಲಿರುವ ಆರೋಗ್ಯ ಪ್ರಯೋಜನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ ಬಿಡಿ. ಅಷ್ಟಕ್ಕೂ ಇದನ್ನು ತಿಂದರೆ ಏನೆಲ್ಲಾ ಸಮಸ್ಯೆ ದೂರ ಸರಿಯುತ್ತೆ ಗೊತ್ತಾ..?


ಬೆಳ್ಳುಳ್ಳಿಯನ್ನು ಕೆಲವರು ಇಷ್ಟ ಪಟ್ಟು ತಿನ್ನುತ್ತಾರೆ. ಇನ್ನು ಕೆಲವರು ಪದಾರ್ಥದಲ್ಲಿ ಬೆಳ್ಳುಳ್ಳಿ ಕಂಡರೆ ಸಾಕು ಮೂಲೆಗೆಸೆಯುತ್ತಾರೆ. ಆದರೆ ಬೆಳ್ಳುಳ್ಳಿ ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅದರಲ್ಲೂ ರಂಜಕ, ಮ್ಯಾಂಗನೀಸ್, ಕ್ಯಾಲ್ಸಿಯಂ ಅನೇಕ ಖನಿಜಗಳು ಇದರಲ್ಲಿದೆ.

ಹೃದ್ರೋಗದಿಂದ ರಕ್ಷಿಸುವ ಗುಣ ಇದಕ್ಕಿದೆ..

ಬೆಳ್ಳುಳ್ಳಿ ಆಹಾರದಲ್ಲಿ ಹಾಕಿ ತಿನ್ನುವುದು ಒಂದೆಡೆಯಾದರೆ, ಹಸಿಯಾಗಿ ತಿಂದರೂ ಪ್ರಯೋಜನವಿದೆ. ಅದರಲ್ಲೂ ಪ್ರತಿನಿತ್ಯ ೨ ಎಸಳು ಬೆಳ್ಳುಳ್ಳಿ ತಿಂದರೆ ಅನೇಕ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಹೃದ್ರೋಗದಿಂದ ರಕ್ಷಿಸುವ ಗುಣ ಬೆಳ್ಳುಳ್ಳಿಗಿದೆ. ದೇಹವನ್ನು ಕಾಯಿಲೆಗಳಿಂದ ರಕ್ಷಿಸುವ ಗುಣ ಬೆಳ್ಳುಳ್ಳಿಗಿದೆ. ಜೊತೆಗೆ ಪೋಷಕಾಂಶಗಳನ್ನು ಬೆಳ್ಳುಳ್ಳಿ ಹೊಂದಿದೆ. ಇದನ್ನು ಚಟ್ನಿ, ಸಾಂಬರ್, ಒಗ್ಗರಣೆ ಸಮಯದಲ್ಲಿ ಅತಿಯಾಗಿ ಬಳಸುತ್ತಾರೆ. ಆದರೆ ತಿನ್ನುವವರ ಸಂಖ್ಯೆ ಮಾತ್ರ ತೀರಾ ಕಡಿಮೆ.

ರಕ್ತ ಶುದ್ಧೀಕರಣ ಮಾಡುತ್ತೆ…

ಮತ್ತೊಂದು ಸಂಗತಿ ಎಂದರೆ ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇನ್ನು ರಕ್ತ ಶುದ್ಧೀಕರಣಕ್ಕೂ ಇದು ನಂಬರ್ ಒನ್. ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣ ಬೆಳ್ಳುಳ್ಳಿಗಿದೆ. ಹುರಿದ ಬೆಳ್ಳುಳ್ಳಿ ತಿಂದರೆ ರಕ್ತದೊತ್ತಡವನ್ನ ನಿಯಂತ್ರಣದಲ್ಲಿ ಇಡಬಹುದಾಗಿದೆ. ಆದರೆ ಅಧಿಕ ರಕ್ತದೊತ್ತಡ ಇರುವವರು ನಿಯಮಿತವಾಗಿ ಸೇವಿಸುವುದು ಬೆಸ್ಟ್.

Leave a Reply

Your email address will not be published. Required fields are marked *