ಬೆಳ್ತಂಗಡಿ:(ಜು.22) ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ. ಮಳೆಯಿಂದ ಅವಾಂತರಗಳು ಸೃಷ್ಟಿಯಾಗುತ್ತಿದೆ.
ಇದನ್ನೂ ಓದಿ: https://uplustv.com/2024/07/22/parliament-budget-session-ಇಂದಿನಿಂದ-ಸಂಸತ್-ಬಜೆಟ್-ಅಧಿವೇಶನ
ಗುಡ್ಡ ಕುಸಿತ ಪ್ರಕರಣಗಳು, ಮನೆ ಮೇಲೆ ಆವರಣದ ಗೋಡೆ ಕುಸಿತ , ಹೀಗೆ ಹಲವಾರು ಅವಾಂತರಗಳು ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಗುಡ್ಡ ಕುಸಿದಿರುವ ಘಟನೆ ನಡೆದಿದೆ. ಅಂತರಗಂಗೆ ನಿವಾಸಿ ಭಾಸ್ಕರ್ ಸಾಲ್ಯಾನ್ ಅವರ ಮನೆಯ ಹಿಂದಿನ ಗುಡ್ಡ ಕುಸಿದಿದೆ.
ಮಳೆಗಾಲಕ್ಕಿಂತ ಮುಂಚಿತವಾಗಿಯೇ ದೊಡ್ಡ ದೊಡ್ಡ ಮರಗಳನ್ನು ಕಡಿದಿದ್ದರಿಂದ ಹೆಚ್ಚಾಗಿ ಹಾನಿ ಆಗಲಿಲ್ಲ.
ಮಣ್ಣು ಭಾರೀ ಪ್ರಮಾಣದಲ್ಲಿ ಬಿದ್ದಿದ್ದು ಅದನ್ನು ತೆರವುಗೊಳಿಸಬೇಕಾಗಿದೆ.
ಮತ್ತೇ ಇದೇ ರೀತಿ ಮಳೆ ಮುಂದುವರಿದರೆ ಹೆಚ್ಚಿನ ಅಪಾಯ ಎದುರಾಗುವ ಸಾಧ್ಯತೆ ಇದೆ.
ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಹಶೀಲ್ದಾರ್ ಪೃಥ್ವಿ ಸಾನಿಕಮ್, ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.