ಮಂಗಳೂರು:(ಜು.22) ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ, ಶಾಲಾ ಆವರಣ ಮತ್ತು ಮೈದಾನವನ್ನು ಯಾವುದೇ “ಶೈಕ್ಷಣಿಕೇತರ” ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ನಿರ್ದೇಶಕರ ಕ್ರಮ ಖಂಡನೀಯ.
ಇದನ್ನೂ ಓದಿ: https://uplustv.com/2024/07/22/mangalore-ಕರ್ನಾಟಕ-ಗೋವಾ-ಹೆದ್ದಾರಿ-ಬಂದ್
ಹಿಂದೂ ಆಚರಣೆಗಳಿಗೆ ತೊಡಕನ್ನು ಉಂಟು ಮಾಡಿ ನಮ್ಮ ಸಂಸ್ಕೃತಿಯನ್ನು ಅಳಿಸುವ ವ್ಯವಸ್ಥಿತ ಹುನ್ನಾರ ಹಾಗೂ ಕಾಂಗ್ರೆಸ್ ಪಾರ್ಟಿ ಮತ್ತು ಸಿದ್ಧರಾಮಯ್ಯ ಸರಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗ ಇದಾಗಿದೆ.
ಹಿಂದುತ್ವದ ಭದ್ರಕೋಟೆಯಲ್ಲಿ ನಿಮ್ಮ ಹಿಂದೂ ವಿರೋಧಿ ಪ್ರಯೋಗಗಳನ್ನು ನಾವು ಎಂದಿಗೂ ಸಹಿಸಲ್ಲ. ಈ ಆದೇಶವನ್ನು ಹಿಂಪಡೆಯಿರಿ ಅಥವಾ ಪ್ರತಿಭಟನೆ ಎದುರಿಸಲು ಸಿದ್ಧರಾಗಿ ಎಂದು ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟ ಆಗ್ರಹಿಸಿದರು.