ಮೇಷ ರಾಶಿ: ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ಇಂದು ನಿಮ್ಮ ವಿರೋಧಿಗಳು ಏನಾದರೂ ತೊಂದರೆಯನ್ನು ಕೊಡಬಹುದು.
ವೃಷಭ ರಾಶಿ: ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ಅಪಮಾನವಾಗುವ ಸಂಗತಿಯನ್ನು ನೀವೇ ತಂದುಕೊಳ್ಳುವಿರಿ. ವ್ಯಕ್ತಿಗತವಾದ ದ್ವೇಷವನ್ನು ಸಂಸ್ಥೆಯ ಮೇಲೆ ತೋರಿಸುವಿರಿ. ನಿಮ್ಮ ಎಲ್ಲ ನಿರ್ಧಾರವೂ ಸರಿಯಾಗಿ ಇರುವುದು ಎಂಬ ಭ್ರಮೆಯಲ್ಲಿ ಇರುವುದು ಬೇಡ.
ಮಿಥುನ ರಾಶಿ: ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ದೇಹಕ್ಕೆ ವಿರುದ್ಧವಾದ ಆಹಾರವನ್ನು ಸೇವಿಸುವಿರಿ. ನಂಬಿಕೆಯ ಆಧಾರದ ಮೇಲೆ ಹೂಡಿಕೆಗಳನ್ನು ಮಾಡಬೇಡಿ.
ಕಟಕ ರಾಶಿ: ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಅನ್ನಿಸುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಆಸಕ್ತಿ ಇರುವುದು. ಕಾರ್ಯಸಾಧನೆಗೆ ಮೊದಲು ವಿಶ್ವಾಸವನ್ನು ಕಳಿಸಿಕೊಳ್ಳುವಿರಿ. ಬಡ್ಡಿ ಇಲ್ಲದೇ ನಿಮಗೆ ಸಾಲ ಸಿಗಲಿದೆ.
ಸಿಂಹ ರಾಶಿ: ಇಂದು ನಿಮ್ಮ ಕಲ್ಪನೆಯೇ ಸುಳ್ಳಾಗಬಹುದು. ಯಾರದೋ ಮಾತಿನಿಂದ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ಪ್ರತ್ಯೇಕವಾಗಿ ಕಂಡಿದ್ದರ ಆಧಾರದ ಮೇಲೆ ಏನನ್ನಾದರೂ ಊಹಿಸಬೇಡಿ. ಎಲ್ಲವೂ ಸತ್ಯವಾಗದು.
ಕನ್ಯಾ ರಾಶಿ: ವೃತ್ತಿಯಲ್ಲಿ ಒತ್ತಡ ಇಲ್ಲದೇ ಇಂದು ನಿಶ್ಚಿಂತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ದುರಭ್ಯಾಸವನ್ನು ಸ್ನೇಹಿತರು ನಿಮಗೆ ಹಿಡಿಸಬಹುದು. ವಿಶ್ವಾಸಘಾತಕರು ನಿಮ್ಮ ಬಳಿ ಸಾಲವನ್ನು ಕೇಳಲು ಬರಬಹುದು. ಕೊಡುವುದಕ್ಕೆ ಹೋಗಬೇಡಿ.
ತುಲಾ ರಾಶಿ: ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಸೋಮಾರಿತನದಿಂದ ಆಗುವ ನಷ್ಟವು ಇಂದು ನಿಮಗೆ ಗೊತ್ತಾಗುವುದು. ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ನಿಮಗೆ ಆಕರ್ಷಿತರಾಗಿ ನಿಮ್ಮ ಮಿತ್ರತ್ವವನ್ನು ಬಯಸಬಹುದು.
ವೃಶ್ಚಿಕ ರಾಶಿ: ನೀವು ನಿಮ್ಮ ಮಕ್ಕಳ ಬಗ್ಗೆ ಇತರರ ಬಗ್ಗೆಯೂ ಹೆಚ್ಚು ಕಾಳಜಿಯನ್ನು ಇರಿಸಿಕೊಳ್ಳುವಿರಿ. ದೇಹಕ್ಕೆ ಸಂಬಂಧಪಟ್ಟಂತೆ ಅದರ ಆರೈಕೆಯನ್ನು ಹೆಚ್ಚು ಮಾಡುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುವುದು.
ಧನು ರಾಶಿ: ಇಂದು ತುರ್ತು ಕಾರ್ಯಗಳು ಹೆಚ್ಚಾಗಬಹುದು. ಇನ್ನೊಬ್ಬರ ವಿಚಾರದಲ್ಲಿ ಮಧ್ಯಪ್ರವೇಶ ಬೇಡ. ಬೇಕಾದರೆ ಅವರೇ ಕರೆಯುತ್ತಾರೆ. ಯಾರನ್ನೋ ಮೆಚ್ವಿಸಲು ಹೋಗಿ ಸಮಯವನ್ನು ಶ್ರಮವನ್ನೂ ವ್ಯಯಮಾಡಿಕೊಳ್ಳಬಹುದು.
ಮಕರ ರಾಶಿ: ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ನಿಮ್ಮ ಮಕ್ಕಳ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಾಧಾನ ಮಾಡಿ. ಕಾನೂನಿಗೆ ಸಮ್ಮತವಾಗಿರುವ ದಾಖಲೆಗಳು ಇರುವಾಗ ಭಯಪಡಬೇಕಾದ ಅವಶ್ಯಕತೆ ಇಲ್ಲ.
ಕುಂಭ ರಾಶಿ: ನಿಮಗೆ ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಹಳೆಯ ಖಾಯಿಲೆಗಳು ಪುನಃ ಬಂದೀತು. ವೈದ್ಯರ ಚಿಕಿತ್ಸೆಯನ್ನು ಪಡೆಯಿರಿ. ಅನಿರೀಕ್ಷಿತ ಹಣ ಬಂದರೂ ಕೂಡಲೇ ಖರ್ಚಾಗುವುದು.
ಮೀನ ರಾಶಿ: ಇಂದು ಅನಾರೋಗ್ಯದಿಂದಲೇ ಹೆಚ್ಚು ಭಾಗವನ್ನು ಕಳೆಯಬೇಕಾಗಬಹುದು. ತಾಯಿಯ ಪ್ರೀತಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ಮನಸ್ಸು ನಕಾರಾತ್ಮಕ ಚಿಂತನೆಯನ್ನು ಬಿಡದು. ನಿಮ್ಮವರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೂ ಅಂತರಂಗದಲ್ಲಿ ಬೇರೆಯದನ್ನೇ ಆಲೋಚಿಸುವರು.