ನವದೆಹಲಿ ( ಜುಲೈ 23) : ಮೊಬೈಲ್ ಫೋನ್ ಮತ್ತು ಚಾರ್ಜರ್ ಮೇಲೆ ತೆರಿಗೆ ಇಳಿಕೆ ಮಾಡಿದ ಮೋದಿ 3.0 ಸರಕಾರ. ಚಿನ್ನ ಮತ್ತು ಬೆಳ್ಳಿ ಮೇಲೂ 6% ಕಸ್ಟಮ್ ಡ್ಯೂಟಿ ಕಡಿತಗೊಂಡಿದೆ. ಪ್ಲಾಟಿನಮ್ ಮೇಲೆ 6.4% ನಷ್ಟು ಕಸ್ಟಮ್ ಡ್ಯೂಟಿ ಕಡಿತಗೊಂಡಿದೆ. ದೇಶದ ತೆರಿಗೆ ಪದ್ಧತಿಯ ಮತ್ತಷ್ಟು ಸರಳೀಕರಣಕ್ಕೆ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ.
ಟಿಡಿಎಸ್ ಪದ್ಧತಿಯಲ್ಲೂ ಸರಳೀಕರಣಕ್ಕೆ ನಿರ್ಣಯವಾಗಿದೆ. ಟಿಡಿಎಸ್ ತೆರಿಗೆ ಶೇ. 1 ರಿಂದ 0.1% ಇಳಿಕೆಯಾಗಿದೆ.
ಹೂಡಿಕೆದಾರರಿಗಿದ್ದ ಏಂಜಲ್ ಟ್ಯಾಕ್ಸ್ ರದ್ದು ಮಾಡುವ ಮಹತ್ವದ ಹೆಜ್ಜೆಯನ್ನು ಕೇಂದ್ರ ಸರಕಾರ ಕೈಗೊಂಡಿದೆ.
ವೈಯಕ್ತಿಕ ಆದಾಯ ತೆರಿಗೆಯಲ್ಲೂ ತೆರಿಗೆದಾರರನ್ನು ಖುಷಿ ಪಡಿಸಿದೆ ಹೊಸ ಬಜೆಟ್.
2,50,000 ದ ವರೆಗೆ ಇದ್ದ ಟ್ಯಾಕ್ಸ್ ರಿಯಾಯಿತಿಯನ್ನು 3,00,000 ಏರಿಸಿದ್ದಾರೆ. ಉಳಿದಂತೆ 3 ಲಕ್ಷದಿಂದ 7 ಲಕ್ಷದವರೆಗೆ 5%, 7 ಲಕ್ಷದಿಂದ 10 ಲಕ್ಷದವರೆಗೆ 10%, 10 ಲಕ್ಷದಿಂದ 12 ಲಕ್ಷದವರೆಗೆ 15%, 12 ಲಕ್ಷದಿಂದ 15 ಲಕ್ಷದವರೆಗೆ 20% ಹಾಗೂ 15 ಲಕ್ಷದಿಂದ ಮೇಲ್ಪಟ್ಟ ಆದಾಯ ಕ್ಕೆ 30% ತೆರಿಗೆ ಅನ್ವಯವಾಗಲಿದೆ.