ಮೇಷ ರಾಶಿ: ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಹಿತಶತ್ರುಗಳು ಸೋಲನ್ನು ಒಪ್ಪಿದರೂ ಇನ್ನೊಂದು ರೀತಿಯಲ್ಲಿ ಗೆಲ್ಲುವ ಯೋಜನೆ ಮಾಡುವರು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಸ್ವಲ್ಪಮಟ್ಟಿನ ಗಾಂಭೀರ್ಯತೆ ಬರಬಹುದು.
ವೃಷಭ ರಾಶಿ: ಸಂಸಾರದ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಅವಕಾಶ ಸಿಗಬಹುದು. ಹೆಚ್ಚಿನ ಶ್ರದ್ಧೆ ಮತ್ತು ತಿಳುವಳಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ಇಂದು ನೀವು ಅಧಿಕ ಶ್ರಮವನ್ನು ಹಾಕಿ ಪ್ರಯೋಜನವನ್ನು ನೋಡಬಹುದು.
ಮಿಥುನ ರಾಶಿ: ಇಂದು ಹೆಚ್ಚು ಆದಾಯದ ಯೋಜನೆಗಳು ನಿಮ್ಮ ಪಾಲಿಗೆ ಸಿಗಲಿದೆ. ಆರ್ಥಿಕವಾಗಿ ಅನೇಕ ಲಾಭಗಳು ಆಗಲಿವೆ. ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ವೇಗದ ಅಚ್ಚುಕಟ್ಟಾದ ಕೆಲಸಕ್ಕೆ ಪ್ರಶಂಸೆ ಸಿಗಬಹುದು. ವೇತನವು ಆಧಿಕವಾಗಲಿದೆ.
ಕಟಕ ರಾಶಿ: ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ಯಾವುದೇ ಮಾತಿಗೆ ನೀವು ತಕ್ಷಣ ಪ್ರತಿಕ್ರಿಯಿಸದಿರುವುದು ಒಳ್ಳೆಯದು. ಧಾರ್ಮಿಕ ಆಚಣೆಯಲ್ಲಿ ಆಸಕ್ತಿ ಹೆಚ್ಚಿರುವ ಸಾಧ್ಯತೆ ಇದೆ. ನೀವು ಬಂಗಾರವನ್ನು ಖರೀದಿಸುವಿರಿ. ದೂರದ ಪ್ರಯಾಣವು ನಿಮಗೆ ಸುಖವನ್ನು ಕೊಟ್ಟೀತು.
ಸಿಂಹ ರಾಶಿ: ನಿಮ್ಮ ಮಾತಿನಿಂದ ಕೆಲವರು ಪ್ರಭಾವಿತರಾಗಬಹುದು. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು.ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು.
ಕನ್ಯಾ ರಾಶಿ: ಗೌರವಕ್ಕಾಗಿ ಕಾರ್ಯವನ್ನು ಮಾಡದೇ ಕರ್ತವ್ಯದ ದೃಷ್ಟಿಯಿಂದ ಮಾಡಿ. ಪ್ರಶಂಸೆಯು ಸಹಜವಾಗಿ ಸಿಗುವುದು. ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ನಿಮ್ಮ ಚಿಂತನೆಗಳು ಬರಬಹುದು.
ತುಲಾ ರಾಶಿ: ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. ನಿಮ್ಮ ಭೂಮಿಯನ್ನು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುವಿರಿ. ನಂಬಿಕೆ ದ್ರೋಹಕ್ಕೆ ನೀವು ಬಹಳ ದುಃಖಪಡುವಿರಿ.
ವೃಶ್ಚಿಕ ರಾಶಿ: ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ನಿರಾಳವಾದ ಮನಸ್ಸು ಇರುವುದು. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಸ್ನೇಹಿತರಿಂದ ಸಾಲವನ್ನು ಕೇಳುವ ಮನಸ್ಸಿದ್ದರೂ ಹೆದರಿಕೆ ಅಂಜಬಹುದು.
ಧನು ರಾಶಿ: ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು ಮಾಡಲಿದೆ. ಇಂದು ನೀವು ನಿಮಗೆ ಆಗುವಷ್ಟು ಕೆಲಸವನ್ನು ಮಾತ್ರ ಮಾಡಿ. ಅತಿಯಾದ ಆಯಾಸವನ್ನೂ ಒತ್ತಡವನ್ನೂ ಮಾಡಿಕೊಳ್ಳುವುದು ಬೇಡ. ಹದಗೆಟ್ಟ ಆರೋಗ್ಯವು ಮತ್ತಷ್ಟು ಹದಗೆಡಬಹುದು. ಹಿರಿಯರ ಮನಸ್ಸನ್ನು ನೋಯಿಸುವಿರಿ.
ಮಕರ ರಾಶಿ: ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಬೇಡದ ವಿಷಯಕ್ಕೆ ಚಿಂತೆ ಹೆಚ್ಚಾಗುವುದು. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ದಾಂಪತ್ಯದಲ್ಲಿ ಸುಖವಿರಬಹುದು. ಎಷ್ಟೋ ದಿನಗಳ ಅನಂತರ ಪರಸ್ಪರ ಮಾತುಗಳು ಖುಷಿ ಕೊಡುವುದು.
ಕುಂಭ ರಾಶಿ: ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ಉದ್ಯಮದಲ್ಲಿ ಹೊಸ ಸಾಧ್ಯತೆಗಳು ಸೃಷ್ಟಿಯಾಗುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ನೂತನ ವಾಹನದಲ್ಲಿ ದೂರ ಪ್ರಯಾಣ ಮಾಡುವಿರಿ. ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿ. ಅದನ್ನು ಯಾರ ಮೇಲೂ ಹೇರುವುದು ಬೇಡ.
ಮೀನ ರಾಶಿ: ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಅದೇ ನಿಮ್ಮ ಸಂಪತ್ತಿನ ಮೂಲವಾಗುತ್ತದೆ. ಸೃಜನಶೀಲತೆಯಿಂದ ನಿಮ್ಮ ಮನಸ್ಸು ಅರಳುವುದು. ನೀವು ಇಷ್ಟು ದಿನ ನಂಬಿಕೆ ಇಟ್ಟವರು ನಿಮ್ಮನ್ನು ವಂಚಿಸಬಹುದು. ಸಹೋದರರ ನಡುವೆ ಆಸ್ತಿಯ ವಿಚಾರದಲ್ಲಿ ಕಲಹವಾಗಬಹುದು.