Wed. Nov 20th, 2024

Ujire: ಶ್ರೀ ಧ.ಮಂ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆ (ಜು.24) : ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭವು ಜುಲೈ 22. 2024ರಂದು ಕಾಲೇಜಿನ ಸಭಾಂಗಣದಲ್ಲಿ ನೆರೆವೇರಿತು.

ಇದನ್ನೂ ಓದಿ: https://uplustv.com/2024/07/24/sunny-mahipal-

ಉದ್ಘಾಟನಾ ಕಾರ್ಯಕ್ರಮವನ್ನುಕೆವಿಜಿ ಪಾಲಿಟೆಕ್ನಿಕ್, ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಶ್ರೀ ಚಂದ್ರಶೇಖರ ಬಿಳಿನೆಲೆ ಇವರು ಉದ್ಘಾಟಿಸಿ,

ಇದನ್ನೂ ಓದಿ: https://uplustv.com/2024/07/24/guruwayanakere-ಗುರುವಾಯನಕೆರೆಯಲ್ಲಿ-ಲಾರಿಯ

ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ, ದೇಶಪ್ರೇಮ ಮತ್ತು ಸಹಾಯ ಮನೋಭಾವಕ್ಕೆ ಈ ರೀತಿಯ ಸ್ವಯಂ ಸೇವಾ ಸಂಘಟನೆಗಳು ಅವಶ್ಯಕವಾಗಿದೆ, ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಜೀವನಕ್ಕೆ ಪೂರಕ ಎಂದರು.

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಅವನೀಶ್ ಪಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಗೌಡ ಇವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಶ್ರೀ ಸಂತೋಷ್ ಇವರು ಶುಭಹಾರೈಸಿದರು.ಸಭಾ ಕಾರ್ಯಕ್ರಮವನ್ನು ಸ್ವಯಂ ಸೇವಕಿ ಅಮಿತಾ ಸ್ವಾಗತಿಸಿ, ಮಿಲನ ವಂದಿಸಿದರು. ಸ್ವಯಂ ಸೇವಕಿ ಭವಿತಾ ನಿರೂಪಿಸಿದರು.

Leave a Reply

Your email address will not be published. Required fields are marked *