ಬೆಳ್ತಂಗಡಿ:(ಜು.27) ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರಿಯುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಸಂಭವಿಸಿದ ಘಟನೆ ನಡೆದಿದೆ.
ಚಾರ್ಮಾಡಿ ಘಾಟಿಯ ಹತ್ತನೆಯ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾಗಿರುವುದಾಗಿ ತಿಳಿದು ಬಂದಿದೆ . ಗುಡ್ಡ ಕುಸಿತದಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಇದನ್ನೂ ಓದಿ: https://uplustv.com/2024/07/27/neriya-ಅಣಿಯೂರು-ಹೊಳೆಯಲ್ಲಿ-ನೀರಿನ-ಪ್ರಮಾಣ-ಹೆಚ್ಚಳ-ಕಾಟಾಜೆ-ರಸ್ತೆಯಲ್ಲಿ
ಚಾರ್ಮಾಡಿ ಘಾಟ್ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು. ಮಂಗಳೂರಿಗೆ ತೆರಳುವವರನ್ನು ಪೊಲೀಸರು ಕೊಟ್ಟಿಗೆಹಾರದಲ್ಲೇ ತಡೆದು ವಾಪಸ್ ಕಳಿಸಿದ್ದಾರೆ.