Wed. Nov 20th, 2024

Boxing: ಪ್ಯಾರಿಸ್ 2024 ಒಲಿಂಪಿಕ್ಸ್ ನಲ್ಲಿ ಭಾರತದ ಬಾಕ್ಸಿಂಗ್‌ ತಂಡ

Boxing: (ಜು.28) ಪ್ಯಾರಿಸ್ ಒಲಿಂಪಿಕ್ಸ್ 2024 ರ ವೇಳಾ ಪಟ್ಟಿಯು ಜಾರಿಗೊಂಡಿದ್ದು, ಈಗಾಗಲೇ ಜುಲೈ 26 ರಂದು ಪ್ಯಾರಿಸ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭವು ಅಧಿಕೃತವಾಗಿ ಚಾಲನೆಗೊಂಡಿದೆ, 200 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 10,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ; https://uplustv.com/2024/07/28/belthangadi-ಗರ್ಡಾಡಿ-ಶಕ್ತಿ-ಕೇಂದ್ರದ-ವತಿಯಿಂದ-ಸಂಸದ-ಕ್ಯಾ-ಬ್ರಿಜೇಶ್-ಚೌಟರಿಗೆ

ಅದರಲ್ಲಿ ಭಾರತದ ಕ್ರೀಡೆಗಳಾದ ಬಾಕ್ಸಿಂಗ್, ಕುಸ್ತಿ, ಬಾಡ್ಮಿಂಟನ್, ಜಾವೆಲಿಂಗ್, ಆರ್ಚರಿ, ಶೂಟಿಂಗ್, ಹಾಕಿ ಮೊದಲಾದ ಕ್ರೀಡೆಗಳು ನಡೆಯಲಿದ್ದು, ಭಾರತದ ಕೀಡಾ ಪಟುಗಳು ಭಾಗವಹಿಸಲಿದ್ದಾರೆ.

ಬಾಕ್ಸಿಂಗ್‌ನಲ್ಲಿ ಭಾರತದ ತಂಡ:

ಈ ಬಾರಿಯ ಒಲಂಪಿಕ್‌ನಲ್ಲಿ ಬಾಕ್ಸಿಂಗ್ ಕ್ರೀಡೆಯು ಜುಲೈ 27ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಪುರುಷರ ವಿಭಾಗದಲ್ಲಿ ನಿಶಾಂತ್ ದೇವ್, ಅಮಿತ್ ಪಂಗಲ್, ನಿಖತ್ ಜರೀನ್ ಆಡಲಿದ್ದಾರೆ. ಅಂತೆಯೇ ಮಹಿಳೆಯರ ತಂಡ ಪ್ರೀತಿ ಪಾವರ್, ಜಾಸ್ಮಿನ್ ಲಂಬೋರಿಯಾ, ಲೊವ್ಲಿನಾ ಬೊರ್ಗೊಹೈನ್ ಕಣಕ್ಕಿಳಿದ್ದಿದ್ದಾರೆ.

ಇನ್ನೂ ವಿಶೇಷ ಅಂದ್ರೆ ಟೋಕಿಯೊ 2020 ರ ಒಲಿಂಪಿಕ್ಸ್ನ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಪ್ಯಾರಿಸ್‌ನಲ್ಲಿ ತನ್ನ ಎರಡನೇ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾರತದ ಬಾಕ್ಸಿಂಗ್ ತಂಡದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಕೂಡ ಸೇರಿದ್ದಾರೆ, ಮಾಜಿ ವಿಶ್ವ ನಂ. 1 ಮತ್ತು ಹಾಲಿ ಕಾಮನ್‌ವೆಲ್ತ್ ಚಾಂಪಿಯನ್ ಅಮಿತ್ ಪಂಗಲ್ ಅವರು ಟೋಕಿಯೊ 2020 ರ ಒಲಿಂಪಿಕ್ಸ್ನಲ್ಲಿ 16 ರ ಸುತ್ತಿನಲ್ಲಿ ಸೋತ ನಂತರ ತಮ್ಮ ಎರಡನೇ ಕ್ರೀಡೆಯಾದ ಪ್ಯಾರಿಸ್ ಒಲಂಪಿಕ್‌ಗೆ ಆಗಮಿಸಿದ್ದಾರೆ.

2023ರ ಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ನಿಶಾಂತ್ ದೇವ್ ತಮ್ಮದಾಗಿಸಿಕೊಂಡಿದ್ದಾರೆ. ಈ
ಹಿನ್ನೆಲೆಯಲ್ಲಿ ನಿಶಾಂತ್ ದೇವ್ ಕೂಡ ಪ್ಯಾರಿಸ್ ಒಲಂಪಿಕ್‌ಗೆ ಆಗಮಿಸಿದ್ದಾರೆ. ಇನ್ನೂ ಜೈಸ್ಮಿನ್ ಲಂಬೋರಿಯಾ 2022 ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡರೆ, ಪ್ರೀತಿ ಪವಾರ್ 2023 ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಪ್ಯಾರಿಸ್ 2024 ಒಲಿಂಪಿಕ್ಸ್ ಬಾಕ್ಸಿಂಗ್: ಭಾರತ ತಂಡ

ಪುರುಷರು: ಅಮಿತ್ ಪಂಗಲ್ (51 ಕೆಜಿ), ನಿಶಾಂತ್ ದೇವ್ (71 ಕೆಜಿ), ನಿಖತ್ ಜರೀನ್ (50 ಕೆಜಿ),
ಮಹಿಳೆಯರು: ಪ್ರೀತಿ ಪವಾರ್ (54 ಕೆಜಿ), ಜೈಸ್ಮಿನ್ ಲಂಬೋರಿಯಾ (57 ಕೆಜಿ), ಲೊವ್ಲಿನಾ ಬೊರ್ಗೊಹೈನ್ (75 ಕೆಜಿ)

ಪ್ಯಾರಿಸ್ 2024 ರಲ್ಲಿ, ಭಾರತೀಯ ಪುರುಷರ ಬಾಕ್ಸರ್‌ಗಳು 50 ಕೆಜಿ, 51ಕೆಜಿ, 71ಕೆಜಿ ತೂಕದ ಬಾಕ್ಸಿಂಗ್ ವಿಭಾಗಗಳಿದ್ದು ಸ್ಪರ್ಧಿಸಲಿದ್ದಾರೆ. ಅಂತೆಯೇ 54ಕೆಜಿ, 57ಕೆಜಿ ಮತ್ತು 75ಕೆಜಿ ತೂಕದ ಬಾಕ್ಸಿಂಗ್ ವಿಭಾಗದಲ್ಲಿ ಭಾರತೀಯ ಮಹಿಳಾ ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ.

ಅಮಿತ್ ಪಂಗಲ್ ಮತ್ತು ಲೊವ್ಲಿನಾ ಬೊರ್ಗೊಹೈನ್ ತಮ್ಮ ಒಲಿಂಪಿಕ್ ಅಭಿಯಾನವನ್ನು 16ರ ಸುತ್ತಿನಿಂದ ಪ್ರಾರಂಭಿಸಿದ್ದರೆ, ಇತರ ನಾಲ್ಕು ಬಾಕ್ಸರ್‌ಗಳು 32ರ ಸುತ್ತಿನಿಂದ ಪ್ರಾರಂಭಿಸಿದ್ದಾರೆ.

ಪ್ರಾಥಮಿಕ ಸುತ್ತುಗಳು ಅರೆನಾ ಪ್ಯಾರಿಸ್ ನಾರ್ಡ್ನಲ್ಲಿ ನಡೆಯಲಿದ್ದು, ಪದಕ ಸುತ್ತಿನ ಪಂದ್ಯಗಳಾದ ಸೆಮಿಫೈನಲ್ ಮತ್ತು ಫೈನಲ್‌ಗಳನ್ನು ರೋಲ್ಯಾಂಡ್ ಗ್ಯಾರೋಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.

Leave a Reply

Your email address will not be published. Required fields are marked *