Wed. Nov 20th, 2024

Paris Olympics 2024: ಮೊದಲ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಿದ ಪಿವಿ ಸಿಂಧು

Paris Olympics 2024:(ಜು.28) ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ. ಸಿಂಧು ಇಂದು ನಡೆದ ಮಹಿಳಾ ಸಿಂಗಲ್ಸ್ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಜಾಕ್ ಅವರನ್ನು ಸೋಲಿಸಿದರು.

ಎಂ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಂಧು, ಫಾತಿಮಾತ್ ಅವರನ್ನು 21-9 21-6 ನೇರ ಗೇಮ್‌ಗಳಲ್ಲಿ ಕೇವಲ 29 ನಿಮಿಷಗಳಲ್ಲಿ ಮಣಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಕೆಲ ತಪ್ಪುಗಳನ್ನು ಎಸಗಿದ ಸಿಂಧು ಮತ್ತೆ ತಿರುಗೇಟು ನೀಡಿ ವಿರಾಮದ ವೇಳೆಗೆ 11-4ರಲ್ಲಿ ಮುನ್ನಡೆ ಸಾಧಿಸಿದರು.

ಕೇವಲ 13 ನಿಮಿಷಗಳಲ್ಲಿ ಮೊದಲ ಗೇಮ್ ಗೆದ್ದ ಮಾಜಿ ವಿಶ್ವ ಚಾಂಪಿಯನ್ ಸಿಂಧುಗೆ ತಿರುಗೇಟು ನೀಡಲು ವಿಶ್ವದ 111ನೇ ಶ್ರೇಯಾಂಕಿತೆ ಫಾತಿಮಾತ್​ಗೆ ಸಾಧ್ಯವಾಗಲಿಲ್ಲ. ಎರಡನೇ ಗೇಮ್‌ನಲ್ಲೂ ಸಿಂಧು ಅಮೋಘ ಆರಂಭ ನೀಡಿ 4-0 ಮುನ್ನಡೆ ಸಾಧಿಸಿದರಾದರೂ ಫಾತಿಮಾತ್‌ ತಿರುಗೇಟು ನೀಡಿ ಸ್ಕೋರ್‌ ಅನ್ನು 3-4ಕ್ಕೆ ಕೊಂಡೊಯ್ದರು.

ಇದಾದ ನಂತರ ಸಿಂಧು ಸತತ ಆರು ಅಂಕಗಳನ್ನು ಸಂಪಾಧಿಸಿ 10-3 ರಿಂದ ಮುನ್ನಡೆ ಸಾಧಿಸಿದರು. 14 ಮ್ಯಾಚ್ ಪಾಯಿಂಟ್‌ಗಳನ್ನು ಪಡೆದ ಸಿಂಧು ಮೊದಲ ಪ್ರಯತ್ನದಲ್ಲಿಯೇ ಪಾಯಿಂಟ್ ಗೆಲ್ಲುವ ಮೂಲಕ ಗೇಮ್ ಮತ್ತು ಪಂದ್ಯವನ್ನು ಗೆದ್ದರು.

Leave a Reply

Your email address will not be published. Required fields are marked *