ಮೇಷ ರಾಶಿ: ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಭೂಮಿಯ ಉತ್ಪನ್ನವನ್ನು ತಯಾರಿಸುತ್ತಿದ್ದರೆ ಉತ್ತಮ ಲಾಭವಿದೆ. ಸಾಲಬಾಧೆಯಿಂದ ಕೆಟ್ಟ ಕೆಲಸವನ್ನು ಮಾಡಲು ಪ್ರೇರಣೆಯಾಗಬಹುದು. ಇದರಿಂದ ಇನ್ನಷ್ಟು ಇಂದು ಹೊಸ ಕೆಲಸಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳು ಶುಭವಾಗಲಿದೆ.
ವೃಷಭ ರಾಶಿ: ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಇಂದು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯ ಸಿಗಲಿದೆ. ಹಿರಿಯರ ಜೊತೆ ನಿಷ್ಠುರ ಏರ್ಪಡಬಹುದು.
ಮಿಥುನ ರಾಶಿ: ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು. ಇಂದು ನಿಮಗೆ ಕುಟುಂಬ ಜೊತೆ ಸಲುಗೆಯಿಂದ ಕಾಲವನ್ನು ಕಳೆಯುವ ಮನಸ್ಸಿರುವುದು. ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ಈ ಮೊದಲೇ ನೀವು ನಿಲ್ಲಿಸಿದ ಯಾ ಕೆಲಸವು ಇಂದು ಪೂರ್ಣವಾಗುವುದು. ಕಚೇರಿಯಲ್ಲಿ ನೀವು ಅಧೀನ ಕಾರ್ಮಿಕರಿಂದ ಒತ್ತಡವನ್ನು ಅನುಭವಿಸುವಿರಿ. ಸಣ್ಣ ಸಣ್ಣ ವಿಷಯಗಳನ್ನು ತಪ್ಪಿಸುವುದು ಒಳ್ಳೆಯದು.
ಕಟಕ ರಾಶಿ: ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಇಂದು ನಿಮ್ಮ ಮಾತಿನ ಮೃದುತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ದುರಭ್ಯಾಸದಿಂದ ಗೊತ್ತಾಗದಂತೆ ಹಣವು ಖರ್ಚಾಗುವುದು. ಇಂದು ನಿಮ್ಮ ಸಹನೆಯ ಪರೀಕ್ಷೆಯೂ ಆಗಬಹುದು.
ಸಿಂಹ ರಾಶಿ: ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆ ಶತ್ರುಗಳೂ ಉಂಟಾಗುವರು. ನಿಮ್ಮ ಮುಂಗೋಪವು ನಿಮ್ಮವರಿಗೆ ಮುಜುಗರವಾಗಬಹುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ಇಂದು ನೀವು ಜೀವನೋಪಾಯಕ್ಕೆ ತೋಚಿದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ವಿಳಂಬದಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ.
ಕನ್ಯಾ ರಾಶಿ: ಎಲ್ಲರಿಗೂ ನೀವು ಇಷ್ಟವಾಗುವಿರಿ. ಇಂದು ಸ್ನೇಹಿತರ ಒತ್ತಾಯಕ್ಕೆ ಮೋಜಿಗಾಗಿ ಹಣವನ್ನು ಹಾಕಿ ಕಳೆದುಕೊಳ್ಳುವಿರಿ. ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು.ಸಮಯಕ್ಕೆ ಸರಿಯಾಗಿ ನಿಮ್ಮ ಜವಾಬ್ದಾರಿಯನ್ನು ಮುಗಿಸುವಿರಿ. ನಿಮ್ಮ ಶತ್ರುಗಳ ಸಂಖ್ಯೆಯು ಇಂದು ಹೆಚ್ಚಾಗಬಹುದು. ರಾಜಕೀಯದಲ್ಲಿ ತೊಡಗಿರುವ ಜನರಿಗೆ ಒಳ್ಳೆಯ ಅನುಕೂಲವಿರಲಿದೆ.
ತುಲಾ ರಾಶಿ: ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟವಾಗುವುದು. ಇಂದು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಇಂದು ಹಣದ ವಿಷಯದಲ್ಲಿ ಅನುಕೂಲವಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯು ಬರಲಿದೆ.
ವೃಶ್ಚಿಕ ರಾಶಿ: ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಹೂಡಿಕೆಯಿಂದ ವ್ಯರ್ಥ ಓಡಾಟವಾಗಬಹುದು. ಪುಣ್ಯ ಸ್ಥಳಗಳ ಭೇಟಿಯ ಭಾಗ್ಯ ಸಿಗುವುದು.
ಧನು ರಾಶಿ: ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ಅನಿರೀಕ್ಷಿತವಾಗಿ ವೈವಾಹಿಕ ಸಂಬಂಧವು ಕೂಡಿ ಬರಬಹುದು. ಬಂದ ಯೋಗವನ್ನು ಬಿಡುವುದು ಬೇಡ. ಇಂದು ಏನನ್ನೂ ಸಾಲವಾಗಿ ಕೊಡುವುದು ಬೇಡ. ಅಧಿಕ ಖರ್ಚೇ ನಿಮ್ಮ ಅಶಾಂತಿಗೆ ಕಾರಣವಾಗುವುದು. ಮನೆ ಸದಸ್ಯರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಸೌಹಾರ್ದತೆ ಮೂಡಲಿದೆ.
ಮಕರ ರಾಶಿ: ನೀವು ಇಂದು ದೇವರ ಮೇಲೆ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ನಿಮ್ಮ ಅತ್ಯುತ್ಸಾಹಕ್ಕೆ ದೇಹವು ಸಹಕರಿಸದೇ ಇರಬಹುದು. ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ. ಇಂದು ಕಲೆಗೆ ಸಂಬಂಧಿಸಿ ಮಾಡುತ್ತಿರುವ ಸುಖಾಂತ್ಯವಾಗುವುದು. ಪಾಲುದಾರರ ಜೊತೆಗಿನ ಒಪ್ಪಂದವು ಅಂತ್ಯವಾಗಬಹುದು.
ಕುಂಭ ರಾಶಿ: ವಿವಾಹಕ್ಕೆ ಎದುರಾಗುವ ದೈವಿಕ ಸಮಸ್ಯೆಯನ್ನು ಧಾರ್ಮಿಕ ಆಚರಣೆಗಳ ಮೂಲಕ ಸರಿ ಮಾಡಿಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಇಂದು ಹಣಕಾಸಿನ ವಿಚಾರದಲ್ಲಿ ಮಾಡಿದ ಪ್ರಯತ್ನಗಳು ಸಫಲವಾಗುವುವು. ಕಲೆಗೆ ಸಂಬಂಧಿಸಿದವರಾಗಿದ್ದರೆ ದೂರದ ಊರಿಗೆ ಪ್ರಯಾಣ ಮಾಡುವಿರಿ.
ಮೀನ ರಾಶಿ: ಇಂದು ನೀವು ಏಕಾಂತವಾಗಿ ಇರಲು ಆಗದು. ಯಾರದೋ ದ್ವೇಷಕ್ಕೆ ನೀವು ಬಲಿಯಾಗಬೇಕಾದೀತು. ಏನಾದರೂ ಅಡಚಣೆ ಇರುವುದು. ನಿಮ್ಮೊಳಗೆ ಅತೃಪ್ತಭಾವವು ಇರಲಿದೆ. ಇಂದು ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಬಹುದು. ಇದು ನಿಮಗೆ ಬಹಳ ದಿನಗಳ ಅನಂತರದ ಸಂತೋಷ ನೀಡುವ ಸಂಗತಿಯಾಗಲಿದೆ. ಸಾಮರಸ್ಯವನ್ನು ಉಂಟುಮಾಡುವುದು ಸುಲಭದ ಕಾರ್ಯವಲ್ಲ. ನೀವು ಇಂದು ನಿಮ್ಮದೇ ಹೊಸ ಉದ್ಯೋಗವನ್ನು ಪ್ರಾರಂಭಿಸುವ ಯೋಚನೆ ಹುಟ್ಟಿಕೊಳ್ಳುವುದು.