ಬೈಂದೂರು:(ಜು.30) ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ವತಿಯಿಂದ ಆಯೋಜಿಸಿದ ಕಾರ್ಗಿಲ್ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆಯು ಬಿಜೆಪಿ ಯುವಮೋರ್ಚಾ ಬೈಂದೂರು ನೇತೃತ್ವದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಇದನ್ನೂ ಓದಿ: ಉಪ್ಪಿನಂಗಡಿ: ಕುಮಾರಧಾರ ನದಿ ಹಾಗೂ ನೇತ್ರಾವತಿ ನದಿ ಸಂಗಮಕ್ಕೆ ಇನ್ನೂ ಎರಡೇ ಮೆಟ್ಟಿಲು ಬಾಕಿ
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಜಿಲ್ಲಾ ಒಬಿಸಿ ಅಧ್ಯಕ್ಷರಾದ ವಿಜಯ್ ಕೊಡವೂರ್ ನಡೆಸಿಕೊಟ್ಟು, ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಾತ್ರವಲ್ಲ ನಮ್ಮ ಪಾತ್ರವು ಅತ್ಯಗತ್ಯ ಅನ್ನುವುದನ್ನು ಹೇಳಿ ಭಾರತೀಯರ ಮೊದಲ ಆದ್ಯತೆಯೇ ದೇಶ ಸೇವೆ ಆಗಬೇಕು ಅನ್ನುವ ಅರಿವು ಮೂಡಿಸಿ ಸ್ಫೂರ್ತಿದಾಯಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಿಗೆ ಮತ್ತು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ವೀರ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ವಿಜಯ್ ಕೊಡವುರ್, ಜಿಲ್ಲಾ ಉಪಾಧ್ಯಕ್ಷರಾದ ಸದಾನಂದ್ ಉಪ್ಪಿನಕುದ್ರು, ಜಿಲ್ಲಾ ಮಹಿಳಾಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಅನಿತಾ ಮರವಂತೆ,
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ರಾಘು ನೆಂಪು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಪೂಜಾರಿ, ಕಾರ್ಯದರ್ಶಿಗಳಾದ ಕರಣ್ ಪೂಜಾರಿ, ಕೃಷ್ಣ ಖಾರ್ವಿ, ಅಶೋಕ್ ಕಂಚಿಕಾನ್, ಒಬಿಸಿ ಮೋರ್ಚಾ ಅಧ್ಯಕ್ಷರಾದ ಶಿವರಾಜ್ ಪೂಜಾರಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ಯಾಮಲಾ ಕುಂದರ್,
ಬೈಂದೂರು ಯುವಮೋರ್ಚಾ ಅಧ್ಯಕ್ಷರಾದ ಗಜೇಂದ್ರ ಬೇಲೆಮನೆ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿಗಳಾದ ಸುಧಾಕರ್ ಶೆಟ್ಟಿ ನೆಲ್ಯಾಡಿ, ಪ್ರವೀಣ್ ಸೋಮಯ್ಯ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಪಿ ಬೈಂದೂರು, ಅನುರ ಮೆಂಡನ್, ಯುವಮೋರ್ಚಾ ಉಪಾಧ್ಯಕ್ಷರುಗಳಾದ ಜಗದೀಶ್ ಕೊಠಾರಿ, ಪ್ರದೀಪ್ ಉಪ್ಪುಂದ,
ಲಕ್ಷ್ಮೀರಾಜ್ ತಲ್ಲೂರ್, ವೇಣುಗೋಪಾಲ್ ಆಜ್ರಿ, ಜಯಂತ್ ಗಂಗೊಳ್ಳಿ, ದೇವಪ್ರಕಾಶ್, ಸುಭಾಷ್,ಮಹೇಶ್ ಪೈ, ಗಿರೀಶ್ ಮೊಗವೀರ್, SC ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್, ಒಬಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ದೇವಾಡಿಗ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಚಂದ್ರ ಜೋಗಿ, ಸುರೇಶ ಬಟ್ವಾಡಿ, ಜಯಾನಂದ್ ಹೋಬಳಿದಾರ್, ಬಾಲಚಂದ್ರ ಭಟ್ ಮುಂತಾದ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಪ್ರಸಾದ್ ಪಿ ಬೈಂದೂರು ನೆರೆವೇರಿಸಿ, ಅನುರಾಮೆಂಡನ್ ಧನ್ಯವಾದಗಳು ತಿಳಿಸಿದರು.