ಬಂಟ್ವಾಳ:(ಜು.30) ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಂಟ್ವಾಳದಲ್ಲಿ ಬೆಳಗ್ಗೆ ನೀರಿನ ಮಟ್ಟ 7.9 ಮೀ. ಗೆ ತಲುಪಿದೆ.
ಇದನ್ನೂ ಓದಿ: ಬೈಂದೂರು: ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ವತಿಯಿಂದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ
ಈಗಾಗಲೇ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ.
ನದಿ ನೀರು ಏರಿಕೆಯಾಗಿದ್ದು, ರಸ್ತೆಗೆ ನದಿ ನೀರು ಬಂದಿರುತ್ತದೆ. ಪೇಟೆ ಭಾಗದ ಮಕ್ಕಳು ಹೆಚ್ಚಾಗಿ ಆಟೋ ಮತ್ತು ವ್ಯಾನ್ ಗಳಲ್ಲಿ ಶಾಲೆಗೆ ತೆರಳುತ್ತಾರೆ.
ನದಿಯ ದಡಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ್ಲಾ ,ಪೆರ್ನೆ , ಕಡೆ ಇನ್ನೂ ನೀರಿನ ಅಪಾಯಕಾರಿ ಮಟ್ಟದಿಂದ ಅಪಾಯವುಳ್ಳ ಶಾಲೆಗಳ ಸಿಆರ್ ಪಿ ಮತ್ತು ಎನ್‌ಟಿಎಂಸಿ ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಹೇಳಿದ್ದಾರೆ.
ಇನ್ನು ಉಪ್ಪಿನಂಗಡಿ ನೇತ್ರಾವತಿ ನೀರಿನ ಮಟ್ಟ :EL 29.6 Mtr (Danger level Above El 29.0 mtr)
AMR Barrage level :EL 18.8 Barrage Gate : 12 Gates-60 % ಓಪನ್ .ಮಟ್ಟಕ್ಕೆ ತಲುಪಿದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.