ಮೇಷ ರಾಶಿ : ಸಲಹೆಯನ್ನು ಉಚಿತವಾಗಿ ಕೊಡಲು ಹೋಗಿ ಅಪಮಾನವಾಗಬಹುದು. ಸಿಕ್ಕಿದಷ್ಟನ್ನೇ ಸ್ವೀಕರಿಸಿ ತೃಪ್ತಿಪಡಿ. ಆಪತ್ತಿನಲ್ಲಿ ಸಹಾಯ ಮಾಡಲಿಲ್ಲ ಎಲ್ಲರನ್ನೂ ಶಪಿಸುವ ಅವಶ್ಯಕತೆ ಇಲ್ಲ. ವಿದ್ಯಾಭ್ಯಾಸದಿಂದ ಲಾಭವಿದೆ ಎಂದು ಅನ್ನಿಸಿ ಶ್ರಮವಹಿಸುವಿರಿ.
ವೃಷಭ ರಾಶಿ : ಸಹೋದರರ ಭಿನ್ನಾಭಿಪ್ರಾಯವನ್ನು ಮೂರನೆಯವರು ಸರಿ ಮಾಡುವರು. ಇಂದಿನ ಕೆಲಸಗಳ ಯೋಜನೆ ಬಗ್ಗೆ ಸರಿಯಾದ ದೃಷ್ಟಿ ಇರಲಿ. ದೂರಪ್ರಯಾಣ ಸುಖಕರವಾಗಿ ಇರುವುದು. ಇಂದು ನಿಮಗೆ ಒಡಹುಟ್ಟಿದವರು ಸಾಕಷ್ಟು ವಿರೋಧವನ್ನು ಮಾಡಿಯಾರು.
ಮಿಥುನ ರಾಶಿ : ನಿಮ್ಮ ಮೇಲೆ ಹೆಚ್ಚಿನ ಕಣ್ಣು ಇರುವ ಕಾರಣ ಬಹಳ ಜಾಗರೂಕತೆ ಅವಶ್ಯಕ. ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಭೂಮಿಯ ವ್ಯವಹಾರದವರಿಗೆ ನಂಬಿಕೆ ದ್ರೋಹ ಆಗಬಹುದು. ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡುವುದು ಕಷ್ಟವಾದೀತು.
ಕಟಕ ರಾಶಿ : ಭಿನ್ನಮತವನ್ನು ನೀವು ಇಂದೇ ಉಪಶಮನ ಮಾಡಿಕೊಳ್ಳುವುದು ಉತ್ತಮ. ಭೂಮಿಯ ಉತ್ಪನ್ನದ ವ್ಯವಹಾರವು ಬಹಳ ಚೆನ್ನಾಗಿ ಆಗಬಹುದು. ಸರ್ಕಾರದಿಂದ ಬರಬೇಕಾದ ಹಣವು ಬಂದು ಸಾಲದಿಂದ ನೀವು ಮುಕ್ತವಾಗುವಿರಿ. ಯಾವುದೇ ದುರಭ್ಯಾಸವು ನಿಮಗೆ ಕೆಟ್ಟ ಹೆಸರನ್ನು ತರಬಹುದು. ಸಾಹಸಪ್ರಿಯರಿಗೆ ಹೊಸ ವಿಚಾರಗಳು ಬರಬಹುದು.
ಸಿಂಹ ರಾಶಿ : ಪುಣ್ಯ ಸ್ಥಳಗಳ ದರ್ಶನದಿಂದ ನಿಮಗೆ ಮಾನಸಿಕ ಅಶಾಂತಿ ದೂರಾಗುವುದು. ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಾಗಲಿದೆ. ಉನ್ನತ ಅಧಿಕಾರಿಗಳಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಅವಸರ ಬೇಡ. ಖರ್ಚನ್ನು ನಿಭಾಯಿಸುವುದು ನಿಮಗೆ ಬಹಳ ಕಷ್ಟವಾದೀತು.
ಕನ್ಯಾ ರಾಶಿ : ಇಂದು ಮಹಿಳೆಯರಿಗೆ ವೃತ್ತಿಯಲ್ಲಿ ಕಿರಿಕಿರಿ ಉಂಟಾಗಲಿದೆ. ಇಂದಿನ ನಿಮ್ಮ ಕೋಪವನ್ನು ಶಾಂತ ಮಾಡಲು ಸಂಗಾತಿಯು ಶ್ರಮಪಡಬಹುದು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಮಹಿಳೆಯರು ಸಕಾರಾತ್ಮಕ ಚಿಂತನೆಯತ್ತ ಗಮನಕೊಡುವುದು ಉತ್ತಮ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದು ಖರ್ಚು ಇನ್ನೂ ಅಧಿಕವಾಗಬಹುದು.
ತುಲಾ ರಾಶಿ : ನಿಮ್ಮ ಕ್ಷಣಿಕ ಕೋಪವೇ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದು. ಇಂದು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವ, ಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಸ್ನೇಹಿತರ ಜೊತೆ ವ್ಯವಹಾರ ಮಾಡುವಾಗ ಅಪನಂಬಿಕೆಗಳು ಬಾರದಂತೆ ಎಚ್ಚರವಹಿಸಿರಿ.
ವೃಶ್ಚಿಕ ರಾಶಿ : ನಿಮ್ಮ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನೀವು ಅಂದುಕೊಂಡಿದ್ದು ಮಾತ್ರ ಸತ್ಯವಾಗಲಾರದು. ಅದಕ್ಕಿರುವ ಮುಖವನ್ನು ಗಮನಿಸಿ ತೀರ್ಮಾನಿಸಿ. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಧೈರ್ಯದಿಂದ ನಿರ್ವಹಿಸಬೇಕಾಗುವುದು. ಉದ್ಯಮಕ್ಕೆ ಆರ್ಥಿಕ ನೆರವು ಸಿಗಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿದ್ದು ಒಪ್ಪಿಕೊಳ್ಳುವಿರಿ.
ಧನು ರಾಶಿ : ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿ. ಅಲ್ಪರ ಸಂಗದಿಂದ ಸ್ವಾಭಿಮಾನ ಧಕ್ಕೆ ಬರುವುದು. ಮುಜುಗರವನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಪ್ರಾಮಾಣಿಕತೆಯಿಂದ ಯಶಸ್ಸು ಸಿಗಲಿದೆ. ಕೆಲಸದ ಮಧ್ಯದಲ್ಲಿಯೂ ಕುಟುಂಬದ ಆಗು ಹೋಗುಗಳತ್ತ ಗಮನಹರಿಸುವಿರಿ.
ಮಕರ ರಾಶಿ : ಮಿತ್ರರ ಜೊತೆ ಮನಸ್ತಾಪ ಏರ್ಪಡುವುದು. ಮೇಲಧಿಕಾರಿಗಳ ಮಾತನ್ನು ಲಘುವಾಗಿ ತೆಗೆದುಕೊಂಡು ಕೆಂಗಣ್ಣಿಗೆ ಗುರಿಯಾಗುವಿರಿ. ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ಕಾರ್ಯಗಳಿಗೆ ನೀವು ತರಬೇತಿ ಪಡೆಯುವಿರಿ. ಹೆಚ್ಚು ಜನರ ಸಂಪರ್ಕ ಮಾಡಬೇಕಾದ ಅನಿವಾರ್ಯತೆ ಬರಬಹುದು. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು.
ಕುಂಭ ರಾಶಿ : ಬೇಡದ ವಿಚಾರದ ಬಗ್ಗೆ ಚರ್ಚೆಗಳು ನಡೆಯಲಿವೆ. ಇಂದು ನಿಮ್ಮನ್ನು ಕಾಳಜಿ ಮಾಡುವವರ ಜೊತೆ ಸಮಯವನ್ನು ಕಳೆಯುವುದು ಉತ್ತಮ ಎನಿಸಬಹುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಆರಂಭಿಸಿದ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯಿಂದ ಇರುವಿರಿ. ಆರ್ಥಿಕತೆಯ ಗೊಂದಲಕ್ಕೆ ಪರಿಹಾರ ದೊರೆಯುವುದು.
ಮೀನ ರಾಶಿ : ದೇವರಲ್ಲಿ ಭಕ್ತಿಯ ಕೊರತೆ ಕಾಣಿಸುವುದು. ನಿಮ್ಮ ಸಂಕೋಚದ ಸ್ವಭಾವದಿಂದ ಹೇಳಬೇಕಾದ ವಿಚಾರವನ್ನು ಹೇಳದೇ ಸುಮ್ಮನಾಗುವಿರಿ. ಉದ್ಯಮದ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಇಂದು ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವುದು ಕಷ್ಟವಾಗಬಹುದು. ಮನಸ್ಸನ್ನು ನಿಯಂತ್ರಿಸಲು ನಿಮಗೆ ಕಷ್ಟವಾದೀತು.