Fri. Apr 18th, 2025

Indabettu: ಮಳೆಯ ಅವಾಂತರಕ್ಕೆ ‌ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರ ವಸತಿ ಗೃಹದ ಬಳಿ ಗುಡ್ಡ ಕುಸಿತ

ಇಂದಬೆಟ್ಟು:(ಜು.31) ವಿಪರೀತವಾಗಿ ಸುರಿದ ಭಾರೀ ಮಳೆಗೆ ಬಂಗಾಡಿ ಸೀಮೆಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರ ವಸತಿ ಗೃಹದ ಬಳಿ ಗುಡ್ಡ ಕುಸಿತ ಉಂಟಾಗಿದೆ.

ಇದನ್ನೂ ಓದಿ; 🛑ಉಳ್ಳಾಲ: ಮಳೆ ಅವಾಂತರ – ಮನೆಯೊಳಗೆ ನುಗ್ಗಿದ ನೀರು – ಹರೇಕಳ ಪರಾರಿದೋಟದ ಮನೆಮಂದಿಯ ಸ್ಥಳಾಂತರ

ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಅವರ ಕುಟುಂಬಸ್ಥರು ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಸ್ಥಳಕ್ಕೆ ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *