ಧರ್ಮಸ್ಥಳ:(ಆ.2) ಧರ್ಮಸ್ಥಳ- ಪಟ್ರಮೆ ರಸ್ತೆಯ ಕೇಂಕನಾಜೆ ಎಂಬಲ್ಲಿ ಅಪಾಯಕಾರಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು.ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಬೀಳುವ ಹಂತದಲ್ಲಿತ್ತು.
ಇದನ್ನೂ ಓದಿ: 🐔ಧರ್ಮಸ್ಥಳ: ಆ.3 ರಂದು ಸ್ವಚ್ಛ ಸಂಕೀರ್ಣ ಘಟಕದ ಆವರಣ ನೇತ್ರಾವತಿಯಲ್ಲಿ ನಾಟಿ ಕೋಳಿ ಏಲಂ ಪ್ರಕಟಣೆ
ತಕ್ಷಣ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಇಲಾಖೆ, ಅರಣ್ಯ ಇಲಾಖೆಯವರು ಆಗಮಿಸಿ ಮರವನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಪಂಚಾಯತ್ ಪಿಡಿಒ, ಧರ್ಮಸ್ಥಳ ಪಂಚಾಯತ್ ಸದಸ್ಯರಾದ ಮುರಳಿದಾಸ್, ಹರ್ಷಿತ್ ಜೈನ್ ಸ್ಥಳದಲ್ಲಿ ಹಾಜರಿದ್ದರು.