Thu. Dec 26th, 2024

Nag Panchami 2024: ನಾಗರ ಪಂಚಮಿಗೆ ಮನೆಗಳಲ್ಲಿ ಈ ಸಿಹಿ ತಿನಿಸುಗಳದ್ದೇ ಘಮ

Nag Panchami 2024:(ಆ.8) ಶ್ರಾವಣ ಮಾಸದಂದು ಮೊದಲ ಹಬ್ಬವಾದ ನಾಗರ ಪಂಚಮಿಯು ಬಂದೇ ಬಿಟ್ಟಿದೆ. ಆಗಸ್ಟ್ 9 ರಂದು ನಾಡಿನಾದಾದಂತ್ಯ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಸಿಹಿ ತಿಂಡಿ ಇಲ್ಲದೆ ಹೋದರೆ ಆ ಹಬ್ಬ ಅಪೂರ್ಣ ಅಂತಾನೇ ಹೇಳ್ಬೋದು. ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಏನೆಲ್ಲಾ ಸಿಹಿ ತಿನಿಸನ್ನು ಮಾಡುತ್ತಾರೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಅರಶಿನ ಎಲೆ ಕಡುಬು : ನಾಗ ದೇವರ ನೈವೇದ್ಯಕ್ಕೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಅರಶಿನ ಎಲೆ ಕಡುಬಿನ ಘಮವು ಎಲ್ಲರ ಮನೆಯ ತುಂಬಾ ಹರಡುತ್ತದೆ. ಅರಿಶಿನ ಎಲೆಗಳಲ್ಲಿ ಸುತ್ತಿ ತಯಾರಿಸುವ ಈ ಸಿಹಿ ತಿಂಡಿಯಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಸಿಹಿಯು ಅರಶಿನ ಎಲೆಯ ಘಮದೊಂದಿಗೆ ರುಚಿಯು ಅಷ್ಟೇ ಅದ್ಭುತ. ತುಳುವಿನಲ್ಲಿ ಅರಶಿನ ಎಲೆ ಪತೋಳಿ ಅಥವಾ ಅರಶಿನ ಎಲೆ ಕಡುಬಿಗೆ ಈರಡ್ಯೆ ಎಂದು ಹೇಳುವುದಿದೆ.

ಶೇಂಗಾ ಉಂಡೆ : ನಾಗರ ಪಂಚಮಿ ಹಬ್ಬಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಶೇಂಗಾದ ಉಂಡೆ ತುಂಬಾನೇ ಫೇಮಸ್. ಸಿಹಿ ತಿನಿಸನ್ನು ಮಾಡುವುದು ಎಷ್ಟು ಸುಲಭವೋ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಬೆಲ್ಲ, ತೆಂಗಿನ ತುರಿ ಹಾಗೂ ಶೇಂಗಾವು ಪರಿಮಳವು ಬಾಯಿಗೆ ಸಿಗುತ್ತಿದ್ದರೆ ಮತ್ತೆ ಮತ್ತೆ ತಿನ್ನಬೇಕೇನಿಸುತ್ತದೆ.

Leave a Reply

Your email address will not be published. Required fields are marked *